", "articleSection": "Government,Religion", "image": { "@type": "ImageObject", "url": "https://prod.cdn.publicnext.com/s3fs-public/52563-1752462943-_(1280-x-720-px)-(5).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ ಜಿಲ್ಲೆಯ ಜನರ ದಶಕಗಳ ಕನಸೊಂದು ಇಂದು ನನಸಾಗುತ್ತಿದೆ. ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಶಿವಮ...Read more" } ", "keywords": "Sigandur bridge inauguration, historic bridge opening, Shivamogga news, Sigandur bridge Karnataka, bridge development project", "url": "https://dashboard.publicnext.com/node" }
ಶಿವಮೊಗ್ಗ ಜಿಲ್ಲೆಯ ಜನರ ದಶಕಗಳ ಕನಸೊಂದು ಇಂದು ನನಸಾಗುತ್ತಿದೆ. ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ.
ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣವಾಗಿರುವ, ಸಿಗಂದೂರು ಸೇತುವೆ ಈಗ ಉದ್ಘಾಟನೆಯ ಹೊಸ್ತಿಲಲ್ಲಿದೆ. ಸುಮಾರು 473 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮಹಾಸೇತುವೆ ಇಂದು ಲೋಕಾರ್ಪಣೆಹೊಳ್ಳಲಿದೆ.
ಶರಾವತಿ ಹಿನ್ನೀರು.. ಮಲೆನಾಡಿನ ಸೌಂದರ್ಯದ ಕಿರೀಟ. ಆದರೆ ಇದೇ ಹಿನ್ನೀರು, ಅಂಬಾರಗೋಡ್ಲು ಮತ್ತು ಕಳಸವಳ್ಳಿ ಭಾಗದ ಜನರಿಗೆ ದಶಕಗಳಿಂದ ಒಂದು ಶಾಪವೂ ಆಗಿತ್ತು. ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಲು ಲಾಂಚ್ಗಳೇ ಆಧಾರವಾಗಿದ್ವು. ಬೆಳಿಗ್ಗೆಯಿಂದ ಸಂಜೆವರೆಗಷ್ಟೇ ಲಭ್ಯವಿದ್ದ ಈ ಲಾಂಚ್ಗೆ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಗಿತ್ತು. ತುರ್ತು ವೈದ್ಯಕೀಯ ಸಂದರ್ಭ ವಿದ್ಯಾರ್ಥಿಗಳು, ರೈತರು, ನೌಕರರಿಗೆ ನಿತ್ಯ ಗೋಳು ತಪ್ತಿರಲಿಲ್ಲ. ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರು ಕೂಡ ಲಾಂಚ್‌ಗಾಗಿ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಈ ಎಲ್ಲಾ ಸಂಕಷ್ಟಗಳಿಗೆ, ಕಾಯುವಿಕೆಗೆ ಈಗ ತೆರೆ ಬೀಳುವ ಸಮಯ ಬಂದಿದೆ. ಈ ಸೇತುವೆ, ಆ ಕಾಯುವಿಕೆಯ ಯುಗಕ್ಕೆ ಅಂತ್ಯ ಹಾಡಿ, ನಿರಂತರ ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡಲಿದೆ.
ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಯ್ಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಂಗಂಧೂರು ಬ್ರಿಡ್ಜ್ ಇಂದು ಲೋಕಾರ್ಪಣೆಯಾಗ್ತಿದೆ.
ಈ ಸೇತುವೆಯ ವಿಶೇಷತೆ ಅಂದ್ರೆ, ಈ ಕೇಬಲ್ ಬ್ರಿಡ್ಜ್ ಬರೊಬ್ಬರಿ 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 2019 ಡಿಸೆಂಬರ್ 12ರಂದು ಸೇತುವೆ ಕಾಮಗಾರಿ ಆರಂಭಗೊಂಡಿದ್ದು, 2025ರ ಜುಲೈ 14ರಂದು ಕಾಮಗಾರಿ ಮುಕ್ತಾಯ ಕಂಡಿದೆ.
ದಿಲೀಪ್ ಬಿಲ್ಡ್ ಕಾನ್ ಏಜಿನ್ಸಿ ಇದನ್ನ ಕಾರ್ಯಗತಗೊಳಿಸಿದೆ. ಇನ್ನು, ಈ ಸೇತುವೆ ಬರೊಬ್ಬರಿ 2,125 ಮೀಟರ್ನಷ್ಟು ಉದ್ದವಿದ್ದು 16 ಮೀಟರ್ ಅಗಲವಿದೆ.. ಇನ್ನು, ಉಕ್ಕಿನ ಕೇಬಲ್ ಉದ್ದ 470 ಮೀಟರ್ ಹೊಂದಿದೆ. ಅಲ್ಲದೇ ಇದರ ಉದ್ದ 38.50 ಮೀಟರ್ನಷ್ಟಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ ಸಿಗಂದೂರಿಗೆ ತೆರಳಿ ಪೂಜೆ ಸಲ್ಲಿಸಿ ಸೇತುವೆ ಲೋಕಾರ್ಪಣೆಗೊಳಿಸಲಿದ್ದಾರೆ.
PublicNext
14/07/2025 08:46 am