", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/463655-1752502828-manjunath-(56).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೆಹಲಿ: “ಟಿಬೆಟ್‌ನ ಆಧ್ಯಾತ್ಮಿಕ ಧರ್ಮಗುರು ದಲೈ ಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ, ಭಾರತದ ಆತಿಥ...Read more" } ", "keywords": ""Dalai Lama, Buddhism, India, China, Tibetan spiritual leader, Buddhist heritage, religious freedom, Dalai Lama statement, China-India relations, Tibet" ", "url": "https://dashboard.publicnext.com/node" } "ಭಾರತ ಬೌದ್ಧ ಸಂಪ್ರದಾಯ ಉಳಿಸುವ ಧರ್ಮ ಭೂಮಿ" – ಚೀನಾಕ್ಕೆ ತಿರುಗೇಟು ನೀಡಿದ ದಲೈ ಲಾಮಾ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಭಾರತ ಬೌದ್ಧ ಸಂಪ್ರದಾಯ ಉಳಿಸುವ ಧರ್ಮ ಭೂಮಿ" – ಚೀನಾಕ್ಕೆ ತಿರುಗೇಟು ನೀಡಿದ ದಲೈ ಲಾಮಾ

ದೆಹಲಿ: “ಟಿಬೆಟ್‌ನ ಆಧ್ಯಾತ್ಮಿಕ ಧರ್ಮಗುರು ದಲೈ ಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ, ಭಾರತದ ಆತಿಥ್ಯಕ್ಕೆ ಆಳವಾದ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.”

ಟಿಬೆಟ್‌ ಮೇಲಿನ ಚೀನಾದ ಆಕ್ರಮಣದ ನಂತರ ದಲೈ ಲಾಮಾ ಸೇರಿದಂತೆ ಅನೇಕರು ಭಾರತಕ್ಕೆ ಪಲಾಯನ ಮಾಡಿಕೊಂಡು ಬಂದು ಇದೀಗ 66 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ನೆನಪಿಸಿಕೊಂಡರು.

ದಲೈ ಲಾಮಾ ಅವರ ಆಪ್ತಮಿತ್ರ ಪ್ರಸಿದ್ಧ ವಿದ್ವಾಂಸರಾದ ಸ್ಯಾಮ್‌ಧೋಂಗ್ ರಿನ್‌ಪೋಚೆ ಅವರು ಓದಿದ ಲಿಖಿತ ಸಂದೇಶದಲ್ಲಿ, ಭಾರತವನ್ನು “ಆರ್ಯ ಭೂಮಿ” ಎಂದು ಕರೆದ ದಲೈ ಲಾಮಾ, “ಇಲ್ಲಿ ಭಾರತದಲ್ಲಿ ನನಗೆ ಪ್ರಾಚೀನ ಭಾರತೀಯ ಜ್ಞಾನವನ್ನು ಅಧ್ಯಯನ ಮಾಡುವ ಅವಕಾಶ ಮತ್ತು ಸ್ವಾತಂತ್ರ್ಯ ಲಭಿಸಿದೆ” ಎಂದು ಬರೆದಿದ್ದಾರೆ. ಬುದ್ಧನ ಭೂಮಿಯಾಗಿರುವ, ವಿಶ್ವದ ಅತ್ಯಂತ ಜನಸಾಂಖ್ಯಿಕ ದೇಶ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ಭಾರತದೊಂದಿಗೆ, ನಾನು “ವಿಶೇಷ ನಿಕಟತೆಯ ಅನುಭವ” ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ (IBC) ಆಯೋಜಿಸಿದ ಈ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳು, ವಿದ್ವಾಂಸರು, ಸಂಶೋಧಕರು ಮತ್ತು ಸಾಧಕರು ಭಾಗವಹಿಸಿದ್ದರು. ದಲೈ ಲಾಮಾ ತಮ್ಮ ಸಂದೇಶದಲ್ಲಿ, “ಬೌದ್ಧ ಕಲಿಕೆಗಳು ಮತ್ತು ಭಾರತೀಯ ಜ್ಞಾನವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಿದರೆ ಜಗತ್ತಿಗೆ ಶಾಂತಿ ಮತ್ತು ಸಂತೋಷ ನೀಡಬಹುದು" ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರ ಟಿಬೆಟಿಯನ್ ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಪರಂಪರೆಯ ಶಿಕ್ಷಣ ನೀಡಲು ಶಾಲೆಗಳ ಸ್ಥಾಪನೆಯನ್ನು ಬಲವಾಗಿ ಬೆಂಬಲಿಸಿದೆ. ಈ ಸಮ್ಮೇಳನವು ಟಿಬೆಟಿಯನ್ ಬೌದ್ಧತೆಯ ಮೇಲೆ ಚೀನಾದ ರಾಜಕೀಯ ಒತ್ತಡದ ವಿರುದ್ಧ, ಭಾರತದಲ್ಲಿ ಆಧ್ಯಾತ್ಮದ ಸ್ವಾತಂತ್ರ್ಯದ ಪ್ರಾಬಲ್ಯವನ್ನು ತೋರಿಸಿದಂತಾಗಿದೆ.

Edited By :
PublicNext

PublicNext

14/07/2025 07:50 pm

Cinque Terre

39.98 K

Cinque Terre

1

ಸಂಬಂಧಿತ ಸುದ್ದಿ