", "articleSection": "News,Religion", "image": { "@type": "ImageObject", "url": "https://prod.cdn.publicnext.com/s3fs-public/463655-1752576980-manjunath-(66).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಭೂಮಿಯಲ್ಲಿ ಸನಾತನ ಧರ್ಮದ ಹೆಸರಿನಲ್ಲಿ ಜನರನ್ನು ಮೋಸಗೊಳಿಸುತ್ತಿದ್ದ ನಕಲಿ ಧಾರ್ಮಿಕ ನಾಯಕರನ್ನು ಪತ್ತೆ ಹಚ್...Read more" } ", "keywords": ""Uttarakhand, Operation Kala Naami, fake sadhus, fake saints, arrested, crackdown on fake gurus, Uttarakhand police, spiritual scam, fake baba" ", "url": "https://dashboard.publicnext.com/node" } ಉತ್ತರಾಖಂಡದಲ್ಲಿ ‘ಆಪರೇಷನ್ ಕಲಾನೇಮಿ’ : 1,250 ನಕಲಿ ಬಾಬಾಗಳು ಅರೆಸ್ಟ್‌!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಾಖಂಡದಲ್ಲಿ ‘ಆಪರೇಷನ್ ಕಲಾನೇಮಿ’ : 1,250 ನಕಲಿ ಬಾಬಾಗಳು ಅರೆಸ್ಟ್‌!

ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಭೂಮಿಯಲ್ಲಿ ಸನಾತನ ಧರ್ಮದ ಹೆಸರಿನಲ್ಲಿ ಜನರನ್ನು ಮೋಸಗೊಳಿಸುತ್ತಿದ್ದ ನಕಲಿ ಧಾರ್ಮಿಕ ನಾಯಕರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ 'ಆಪರೇಷನ್ ಕಲಾನೇಮಿ' ಎಂಬ ವಿಶೇಷ ಕಾರ್ಯಾಚರಣೆಯನ್ನು ಜುಲೈ 10ರಿಂದ ಆರಂಭಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಈವರೆಗೆ ಸುಮಾರು 1,250 ನಕಲಿ ಬಾಬಾಗಳನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನಿರ್ದೇಶನದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ನಿಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯ ಭಾಗವಾಗಿ, ಪೊಲೀಸರು ಡೆಹ್ರಾಡೂನ್‌ನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಸಂತರು ಮತ್ತು ಋಷಿಗಳಂತೆ ವೇಷಧರಿಸಿ ವಂಚನೆ ನಡೆಸುತ್ತಿದ್ದ 34 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 23 ಮಂದಿ ಬೇರೆ ರಾಜ್ಯದವರಾಗಿದ್ದು, ಜನರನ್ನು ಮೋಸಗೊಳಿಸುತ್ತಿದ್ದರು ಎಂದು ಎಸ್‌ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ.

ಕನ್ವಾರಿಯಾಗಳಂತೆ ವೇಷಧರಿಸಿ ಜನರನ್ನು ಭ್ರಮೆಗೊಳಪಡಿಸುತ್ತಿದ್ದವರನ್ನು ಗುರುತಿಸಲು ಎಲ್ಲಾ ಎಸ್‌ಪಿ ಹಾಗೂ ಎಸ್‌ಎಸ್‌ಪಿ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದ್ದು, ಈ ಸಂಬಂಧ ರಾಜ್ಯದಾದ್ಯಂತ ಪೋಲೀಸರ ಪರಿಶೀಲನೆ ತೀವ್ರಗೊಳಿಸಲಾಗಿದೆ.

ಬಂಧಿತರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗಿದೆ. ಇನ್ನು ಮುಂದೆ ಧಾರ್ಮಿಕ ಭಾವನೆಗಳನ್ನು ದುರ್ಬಳಕೆಮಾಡುವವರ ವಿರುದ್ಧ ಉತ್ತರಾಖಂಡ ಪೊಲೀಸರು ಸಹಿಷ್ಣುತೆ ತೋರಿಸದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Edited By :
PublicNext

PublicNext

15/07/2025 04:27 pm

Cinque Terre

32.96 K

Cinque Terre

8

ಸಂಬಂಧಿತ ಸುದ್ದಿ