ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನ ಲ್ಯಾಂಡಿಂಗ್ ವೇಳೆ ತೊಂದರೆ, ತಕ್ಷಣ ಟೇಕಾಫ್ : ಪೈಲಟ್ ಚಾಣಾಕ್ಷತನದಿಂದ 173 ಪ್ರಯಾಣಿಕರು ಸೇಫ್!

ಪಾಟ್ನಾ: ದೆಹಲಿಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ವೇಳೆ ತೊಂದರೆ ಉಂಟಾಗಿ, ಪೈಲಟ್‌ನ ಸಮಯೋಚಿತ ನಿರ್ಧಾರದಿಂದ ಮತ್ತೊಮ್ಮೆ ಟೇಕಾಫ್ ಆಗಿ ಬಳಿಕ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.

ಮಂಗಳವಾರ ರಾತ್ರಿ ದೆಹಲಿಯಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ಸಂಖ್ಯೆ 6ಇ2482, ಪಾಟ್ನಾದ ಜಯ ಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಕೂದಲೆಳೆ ಅಂತರದಲ್ಲಿ ಪಾರಾಗಿದೆ.

ವಿಮಾನವು ಲ್ಯಾಂಡ್ ಆಗುವಾಗ ಗೊತ್ತುಪಡಿಸಿದ ಟಚ್‌ಡೌನ್ ಪಾಯಿಂಟ್‌ಗಿಂತ ಮುಂದೆ ಇಳಿದಿದೆ. ಇದನ್ನರಿತ ಪೈಲಟ್ ಉಳಿದ ರನ್‌ವೇ ಉದ್ದವು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಮತ್ತೆ ಚಾಣಾಕ್ಷತನದಿಂದ ಟೇಕಾಫ್ ಮಾಡಿದ್ದಾರೆ. ಬಳಿಕ ಮೂರು ಸುತ್ತು ಹಾರಾಟ ನಡೆಸಿ, ರಾತ್ರಿ 9 ಗಂಟೆಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.

ವಿಮಾನದಲ್ಲಿದ್ದ 173 ಪ್ರಯಾಣಿಕರು ಸುರಕ್ಷಿತರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದ ರನ್‌ವೇ ಚಿಕ್ಕದಾಗಿರುವುದರಿಂದ ಲ್ಯಾಂಡಿಂಗ್ ವೇಳೆ ಆಗಾಗ ಸವಾಲು ಎದುರಾಗುತ್ತೆ ಎಂದು ಹೇಳಲಾಗುತ್ತಿದೆ.

Edited By : Abhishek Kamoji
PublicNext

PublicNext

16/07/2025 12:00 pm

Cinque Terre

13.03 K

Cinque Terre

0