", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1752748637-_(1280-x-720-px)-(14).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೆ ಇದನ್ನೇ ಲಾಭ ಮಾಡಿಕ...Read more" } ", "keywords": "Karnataka vs Andhra, MB Patil, Nara Lokesh, political rivalry, Karnataka politics, Andhra Pradesh politics", "url": "https://dashboard.publicnext.com/node" }
ಬೆಂಗಳೂರು : ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೆ ಇದನ್ನೇ ಲಾಭ ಮಾಡಿಕೊಂಡಿರುವ ಪಕ್ಕದ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಏರೋಸ್ಪೇಸ್ ಉದ್ಯಮಿಗಳಿಗೆ ಬಲೆ ಬೀಸಿದ್ದಾರೆ. ಬೆಂಗಳೂರಿನಲ್ಲಿ ಜಾಗ ಸಿಗದೇ ಇದ್ದರೇನು? ನಾವು ಆಂಧ್ರದಲ್ಲಿ ಕೊಡ್ತೀವಿ ಬನ್ನಿ ಎಂದು ಓಪನ್ ಆಫರ್ ಕೊಟ್ಟಿದ್ದಾರೆ.
ನಿಮಗೆ ಎಲ್ಲ ಸೌಲಭ್ಯ ಕೊಡ್ತೀವಿ: ನಾರಾ "ಆತ್ಮೀಯ ಏರೋಸ್ಪೇಸ್ ಉದ್ಯಮ, ಬೆಂಗಳೂರಿನಲ್ಲಿ ನಡೆದ ವಿಚಾರದ ಬಗ್ಗೆ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಐಡಿಯಾ ಇದೆ. ನೀವು ಆಂಧ್ರಪ್ರದೇಶವನ್ನು ಏಕೆ ನೋಡಬಾರದು? ಬೆಂಗಳೂರಿನ ಹೊರಗೆ ಅತ್ಯುತ್ತಮ ಪ್ರೋತ್ಸಾಹ ಧನ ಮತ್ತು 8,000 ಎಕರೆಗಳಿಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ ಹೊಂದಿರುವ ಆಕರ್ಷಕ ಏರೋಸ್ಪೇಸ್ ನೀತಿಯನ್ನು ನಾವು ನಿಮಗಾಗಿ ಹೊಂದಿದ್ದೇವೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು, ಚರ್ಚಿಸಲು ಆಶಿಸುತ್ತೇವೆ" ಎಂದು ಆಹ್ವಾನ ನೀಡಿದ್ದಾರೆ.
ಇನ್ನೂ ಸಚಿವ ನಾರಾ ಲೋಕೇಶ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿ ಎಕ್ಸ್ ಪೋಸ್ಟ್ ಮಾಡಿದಕ್ಕೆ ಕಿಡಿಕಾರಿರುವ ಸಚಿವ ಎಂ.ಬಿ ಪಾಟೀಲ್ ಬುಧವಾರ ದಿಟ್ಟ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಪುತ್ರ ಹಾಗೂ ನಾರಾ ಲೋಕೇಶ್ ಅವರಿಗೆ ಯಾವಾಗ ಮಾಡಬೇಕೆಂದು ಮತ್ತು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ ಎಂದು ಪ್ರತಿ ಸವಾಲು ಎಸೆದಿದ್ದಾರೆ.
ಎಂ.ಬಿ.ಪಾಟೀಲ್ ಅವರು ಮಾಡಿದ ಪೋಸ್ಟ್
ಆತ್ಮೀಯ ನಾರಾ ಲೋಕೇಶ್ ”ಕರ್ನಾಟಕವು ಕೇವಲ ಭೂಮಿಯನ್ನು ನೀಡುವುದಿಲ್ಲ – ಇದು ಭಾರತದ ನಂ.1 ಏರೋಸ್ಪೇಸ್ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯನ್ನು ನೀಡುತ್ತದೆ.ನಾವು ದಶಕಗಳಲ್ಲಿ ದೇಶದ ಬಲಿಷ್ಠವಾದ ಏರೋಸ್ಪೇಸ್ ನೆಲೆಯನ್ನು ನಿರ್ಮಿಸಿದ್ದೇವೆ, ಭಾರತದ ಏರೋಸ್ಪೇಸ್ ಉತ್ಪಾದನೆಯ 65% ಕೊಡುಗೆ ನೀಡುತ್ತಿದ್ದೇವೆ ಮತ್ತು ರಾಷ್ಟ್ರೀಯವಾಗಿ ನಂ.1, ಜಾಗತಿಕವಾಗಿ 3ನೇ ಸ್ಥಾನದಲ್ಲಿದ್ದೇವೆ.
ಇದು ಕೇವಲ ಭೂಮಿಯ ಬಗ್ಗೆ ಅಲ್ಲ – ಇದು ಪ್ರತಿಭೆ, ನಾವೀನ್ಯತೆ ಮತ್ತು ಸಾಬೀತಾಗಿರುವ ಪರಿಸರ ವ್ಯವಸ್ಥೆಯ ಬಗ್ಗೆ ಏನು ಮಾಡಬೇಕೆಂದು, ಯಾವಾಗ ಮಾಡಬೇಕೆಂದು ಮತ್ತು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ. ಯಾವುದರಿಂದಲೂ ಜಾರಿಕೊಳ್ಳುವುದಿಲ್ಲ. ಕರ್ನಾಟಕವು $1 ಟ್ರಿಲಿಯನ್ ಆರ್ಥಿಕತೆಯನ್ನು ತಲುಪುವ ಮೊದಲ ರಾಜ್ಯಗಳಲ್ಲಿ ಒಂದಾಗಲಿದೆ ಮತ್ತು ಇದು ಕೇವಲ ಏರೋಸ್ಪೇಸ್ ಅಲ್ಲ, ಅನೇಕ ಹೊಸ ಕೈಗಾರಿಕೆಗಳು ಕರ್ನಾಟಕವನ್ನು ಆಯ್ಕೆ ಮಾಡುತ್ತಲೇ ಇವೆ ಮತ್ತು ಅಸ್ತಿತ್ವದಲ್ಲಿರುವ ಕೈಗಾರಿಕೆಗಳು ಇಲ್ಲಿ ವಿಸ್ತರಿಸುತ್ತಲೇ ಇವೆ. ಬೆಳವಣಿಗೆ ಮತ್ತು ಹೊಸ ಹೂಡಿಕೆಗಳನ್ನು ಬೆಂಬಲಿಸಲು ಅಗತ್ಯವಿರುವ ಭೂಮಿ ಮತ್ತು ಪರಿಸರ ವ್ಯವಸ್ಥೆಯನ್ನು ನಾವು ಯಾವಾಗಲೂ ಖಚಿತಪಡಿಸಿಕೊಳ್ಳುತ್ತೇವೆ.ನಿಮ್ಮ ರಾಜ್ಯಕ್ಕೂ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
PublicNext
17/07/2025 04:16 pm