ಬೆಂಗಳೂರು : ಮಾಜಿ ಸಚಿವ ಶಾಸಕ ಬೈರತಿ ಬಸವರಾಜ್ ವಿರುದ್ಧ ಕೊಲೆ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಬೈರತಿ ಅವರ ಮೇಲೆ ಬಂದಿರೋದು ಆರೋಪವೇ ಹೊರತು ಅಪರಾಧಿ ಅಲ್ಲ ಅವರು ನನಗೆ ಹತ್ತಾರು ವರ್ಷಗಳಿಂದ ಪರಿಚಯ, ಅವರು ಆ ತರದ ಅವಿವೇಕದ ಕೆಲಸ ಮಾಡೋರಲ್ಲ, ಇಷ್ಟು ಕೀಳುತನಕ್ಕೆ ಇಳಿಯಲ್ಲ ಇದು ಸುಳ್ಳು ಕೇಸ್, ಅವರು ನಿರ್ದೋಷಿಯಾಗಿ ಹೊರಗೆ ಬರ್ತಾರೆ ಅನ್ನೋ ವಿಶ್ವಾಸ ನನಗೆ ಇದೆ.
ಕಾನೂನು ಮೀರಿ ಒಬ್ಬ ಜನಪ್ರತಿನದಿಗೆ ಸರ್ಕಾರ ತೊಂದರೆ ಕೊಡಬಾರದು. ಹೊಟ್ಟೆಕಿಚ್ಚಿಗೋಸ್ಕರ ಬೈರತಿ ಮೇಲೆ ಗೂಬೆ ಕೂರಿಸಿದ್ದಾರೆ, ಬೈರತಿ ಬಸವರಾಜ್ ಇಂಥ ಕೀಳು ಮಟ್ಟಕ್ಕೆ ಇಳಿಯೋರಲ್ಲ ಎಂದು ಬೈರತಿ ಪರ ವಿ ಸೋಮಣ್ಣ ಬ್ಯಾಟಿಂಗ್ ಮಾಡಿದ್ರು.
PublicNext
19/07/2025 02:41 pm