ಮುಂಬೈ: “ಪುರುಷನು ನಿವೃತ್ತಿವರೆಗೆ ಮಾತ್ರ ಕೆಲಸ ಮಾಡುತ್ತಾನೆ, ಆದರೆ ಮಹಿಳೆ ತನ್ನ ಜೀವನದ ಕೊನೆಯವರೆಗೂ ದುಡಿಯುತ್ತಲೇ ಇರುತ್ತಾಳೆ. ಮಹಿಳೆಯ ಸಬಲೀಕರಣವು ರಾಷ್ಟ್ರದ ಪ್ರಗತಿಗೆ ಅತ್ಯಗತ್ಯ. ಪ್ರತಿಗಾಮಿ ಪದ್ದತಿಗಳು ಮತ್ತು ಸಂಪ್ರದಾಯಗಳಿಂದ ಅವರನ್ನು ಮುಕ್ತಗೊಳಿಸಬೇಕಿದೆ,” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಸೊಲಾಪುರದಲ್ಲಿ ಉದ್ಯೋಗವರ್ಧಿನಿ ಎಂಬ ಲಾಭರಹಿತ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳೆಯರು ಪ್ರತಿಯೊಂದು ಸಮಾಜದ ಅನಿವಾರ್ಯ ಅಂಗ. ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ಹಾಗೂ ನೈತಿಕತೆ ನೀಡುವ ಮೂಲಕ ಮುಂದಿನ ಪೀಳಿಗೆ ರೂಪಿಸುವ ಮಹತ್ತರ ಜವಾಬ್ದಾರಿ ಅವರದ್ದಾಗಿದೆ,” ಎಂದು ಹೇಳಿದರು.
“ದೇವರು ಮಹಿಳೆಗೆ ಹೆಚ್ಚುವರಿ ಶಕ್ತಿಗಳನ್ನು ನೀಡಿದ್ದಾನೆ. ಪುರುಷರು ಮಾಡುವ ಪ್ರತಿಯೊಂದು ಕಾರ್ಯವನ್ನು ಮಹಿಳೆಯೂ ನಿರ್ವಹಿಸಬಲ್ಲ ಶಕ್ತಿ ಹೊಂದಿದ್ದಾರೆ. ಹಾಗೆಯೇ ಪುರುಷನಲ್ಲಿರುವ ಎಲ್ಲ ಗುಣಗಳು ಮಹಿಳೆಯಲ್ಲಿಯೂ ಇವೆ,” ಎಂದು ಭಾಗವತ್ ಅಭಿಪ್ರಾಯಪಟ್ಟರು.
PublicNext
19/07/2025 03:29 pm