ಬೆಂಗಳೂರು: ಲ್ಯಾಂಡ್ ಜಿಹಾದ್ ಗೆ ಕಾಂಗ್ರೆಸ್ ಸಪೋರ್ಟ್ ಕೊಡ್ತಿದೆ ಎಂದು ನಾವು ಕಾಂಗ್ರೆಸ್ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಸ್ಸಾಂ ಸಿಎಂ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲ್ಯಾಂಡ್ ಜಿಹಾದ್ ಬಗ್ಗೆ ನನಗೆ ಗೊತ್ತಿಲ್ಲ, ನನ್ನ ಮೇಲೆ ಕ್ರಮ ತೆಗೆದುಕೊಳ್ಳೋದಾದ್ರೆ ಸ್ವಾಗತ. ಅವರು ಯಾವಾಗ ಕ್ರಮ ತೆಗೆದುಕೊಳ್ತಾರೆ, ಆಗ ನಾವು ಹೋಗಿ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.
ಇನ್ನೂ ರಾಬರ್ಟ್ ವಾದ್ರಾ ಮೇಲೆ ED ಕೇಸ್ ದಾಖಲು ಬಗ್ಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ವಾದ್ರಾ ಮೇಲೆ ಕೇಸ್ ಹಾಕಿ ಕೆಟ್ಟ ಹೆಸರು ತರುವ ಪ್ರಯತ್ನ ಮಾಡ್ತಿದ್ದಾರೆ ಅಷ್ಟೇ. ಅವರು ಯಶಸ್ವಿಯಾಗಲ್ಲ, ಕೋರ್ಟ್ ಇವೆ. ಹೀಗೆ ವಾದ್ರಾಗೆ ತೊಂದರೆ ಕೊಡೋದು ಸರಿಯಲ್ಲ, ನಾವೆಲ್ಲಾ ಅವರಿಗೆ ಸಪೋರ್ಟ್ ಮಾಡ್ತೇವೆ ಎಂದರು. ಎಐಸಿಸಿಯಿಂದ ನಾಮ ನಿರ್ದೇಶನ ಪಟ್ಟಿಗೆ ತಡೆಯಾಗುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದರು.
PublicNext
19/07/2025 05:10 pm