ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಬೆಳಗಾದರೆ ಮೋದಿ TVನಲ್ಲಿ ಬೊಗಳುತ್ತಿರುತ್ತಾರೆ.... ಖರ್ಗೆ ವಾಗ್ದಾಳಿ

ಮೈಸೂರು : ಮೈಸೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಸಾಧನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ PM ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರು ದಿನಾ ಬೆಳಗಾದ್ರೆ ಟಿವಿಯಲ್ಲಿ ಕಾಣಿಸಿಕೊಳ್ಳುವುದು ದಿನ ಪೂರ್ತಿ TV ನಲ್ಲಿ ಕಾಣಬೇಕು ಅಷ್ಟೆ ಅವರ ಉದ್ದೇಶ ಎಂದು ಕಿಡಿಕಾರಿದ್ದಾರೆ. ಹಿಂದೆ ಯಾವ PM ಕೂಡ ಇವರ ರೀತಿ ದಿನ ಬೆಳಗಾದರೆ TVನಲ್ಲಿ ಬೊಗಳುತ್ತಿರಲಿಲ್ಲ. ಅದಾನಿ, ಅಂಬಾನಿಗೆ ದೇಶದ ಆಸ್ತಿಯನ್ನು ಮೋದಿ ಮಾರುತ್ತಿದ್ದಾರೆ. ದೇಶದ ಜನ ಸಂಕಷ್ಟದಲ್ಲಿ ಇದ್ದಾಗ ಮೋದಿ ವಿದೇಶ ಪ್ರವಾಸ ಮಾಡುತ್ತಾರೆ. ಮಣಿಪುರಕ್ಕೆ ಹೋಗಿ ಅಲ್ಲಿನ ಜನರ ಸಾಂತ್ವನ ಹೇಳಲಿಲ್ಲ ಎಂದಿದ್ದಾರೆ.

ಯಾವುದೇ ಯೋಜನೆ ಇದ್ದರು ಸಿದ್ದರಾಮಯ್ಯ ಅವರು ಮೊದಲ ಪ್ರಾಧಾನ್ಯತೆ ಕೊಡುವುದು ಮೈಸೂರಿಗೆ. ಮೈಸೂರಿನ‌ ಮೇಲೆ ಸಿದ್ದರಾಮಯ್ಯ ಗೆ ಪ್ರೀತಿ ಜಾಸ್ತಿ. ಮೈಸೂರಿಗೆ ಯಾವಾಗಲೂ ಹಣದ ಹೊಳೆಯನ್ನು ಸಿದ್ದರಾಮಯ್ಯ ಹರಿಸುತ್ತಾರೆ. ಬಿಜೆಪಿ ಯವರು ಟೀಕಾಚಾರಿಗಳು ಅಷ್ಟೆ. ಅಭಿವೃದ್ಧಿ ಕೆಲಸ ಮಾಡುವುದೆ ಇಲ್ಲ. ಬಿಜೆಪಿ ಮಾಡುವುದು ಭ್ರಷ್ಟಾಚಾರ ಮಾತ್ರ. ಕಾಂಗ್ರೆಸ್ ಕ್ಯಾ‌ ಕಿಯಾ ಎಂದು ಮೋದಿ ಅವರು ಪದೇ ಪದೇ ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟ ಕೊಡುಗೆ ಜನರ ಕಣ್ಮುಂದೆ ಇದೆ ಎಂದು ಹೇಳಿದ್ದಾರೆ.

ಸಂವಿಧಾನ‌ ಬದಲಾವಣೆ ಮಾಡಲು ಜನ ಅವಕಾಶ ಕೊಟ್ಟರೆ ಜನ ಸತ್ತಂತೆ. ಬಿಜೆಪಿ ಎಷ್ಟೇ ತಿಪ್ಪಾರಲಾಗ ಹಾಕಿದರು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್ ಒಬ್ಬರೆ ಸಂವಿಧಾನ ಮಾಡಿದ್ದಾ ಅಂತಾ ಬಿಜೆಪಿ ಕೇಳುತ್ತೆ? ಅಂಬೇಡ್ಕರ್ ಅಲ್ಲದೆ ಏನೂ ಅವರ ತಾತಾಂದಿರು ಮಾಡಿದ್ರಾ? RSS ಅವರು ಮಾಡಿದ್ರಾ? ಸಂವಿಧಾನದ ಕೊಲೆಯನ್ನು ಮೋದಿ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಭಾಷಣದಲ್ಲಿ ಹೇಳಿದ್ದಾರೆ.

ಸಿದ್ದು ಹಣಕಾಸು ಸಚಿವರಾದಾಗ ಲಕ್ಷ್ಮೀ ಕುಂಟಾಗಿ ಖಜಾನೆಯಲ್ಲಿ ಕೂರ್ತಾಳೆ ಐದು ಗ್ಯಾರಂಟಿ ಬರೀ ಸಿದ್ದರಾಮಯ್ಯ ಮನೆಗೆ, ಡಿಕೆ ಶಿವಕುಮಾರ್ ಮನೆಗಾ, ಪರಮೇಶ್ವರ್ ಮನೆಗೆ ಕೊಟ್ಟಿದ್ದಿವಾ? ಇಷ್ಟು ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಕೊಟ್ಟ ಮೇಲೂ ನಮ್ಮವರೆ ಕೆಲವರು ಅಭಿವೃದ್ಧಿ ಆಗ್ತಿಲ್ಲ ಅಂತಾರೆ? ಯಾಕೆ ಅಂತಾನೆ ಗೊತ್ತಾಗಲ್ಲ. ಈ ಸರಕಾರ ದಿವಾಳಿ ಆಗಿದೆ ಎಂದು ಸುಳ್ಳು ಹಬ್ಬಿಸಿದ್ದಾರೆ ಎಂದು ಮಲ್ಲುಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಸರ್ಕಾರ ದಿವಾಳಿ ಆಗಿಲ್ಲ. ದಿವಾಳಿ ಆಗಿದ್ದರೆ ಶಾಸಕರಿಗೆ 50 ಕೋಟಿ ರು. ಅನುದಾನ ಕೊಡುತ್ತಿದ್ದರಾ? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಲಕ್ಷ್ಮಿ ಓಡುತ್ತಾಳೆ. ಮೋದಿ ಅವರೆ ಕರ್ನಾಟಕಕ್ಕೆ ಬಂದು ನೋಡಿ. ಈ ನಾಡು ಎಷ್ಟು ಸುಭಿಕ್ಷವಾಗಿದೆ ಅಂತಾ. ಕರ್ನಾಟಕಕ್ಕೆ ಬಂಡವಾಳ ಹೂಡಿಕೆ ಮಾಡಲು ಹುಡುಕಿ ಹುಡುಕಿ ಜನ‌ ಬರುತ್ತಿದ್ದಾರೆ. ಹೊಟ್ಟೆ ಕಿಚ್ಚಿಗೆ ಆರೋಪ ಮಾಡುತ್ತಾರೆ. ಹೊಟ್ಟೆ ಕಿಚ್ಚಿಗೆ ಮದ್ದು ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಯನ್ನು ಮೋದಿ 1% ಕೂಡ ಮಾಡಿಲ್ಲ ಎಂದು ಟೀಕಿಸಿದ್ದಾರೆ.

Edited By : Nirmala Aralikatti
PublicNext

PublicNext

19/07/2025 05:48 pm

Cinque Terre

62.59 K

Cinque Terre

35

ಸಂಬಂಧಿತ ಸುದ್ದಿ