", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1752936104-WhatsApp-Image-2025-07-19-at-8.08.02-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು : ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ಮಾತು ಆರಂಭಿಸುವ ಮುನ್ನ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲಿದ್ದ ಗ...Read more" } ", "keywords": "DK Shivakumar criticism, CM Siddaramaiah response, Karnataka politics, Congress infighting, Siddaramaiah statement", "url": "https://dashboard.publicnext.com/node" }
ಮೈಸೂರು : ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ಮಾತು ಆರಂಭಿಸುವ ಮುನ್ನ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲಿದ್ದ ಗಣ್ಯರೆಲ್ಲರನ್ನೂ ಆಹ್ವಾನಿಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಯವರನ್ನೇ ಸ್ವಾಗತಿಸಿಲ್ಲ.
ಈ ವಿಚಾರ ಗಮನಿಸಿದ ಕಾಂಗ್ರೆಸ್ ನಾಯಕರೊಬ್ಬರು ಮುಖ್ಯಮಂತ್ರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ರನ್ನೇ ಮರೆತಿರಿ ಎಂದು ಜ್ಞಾಪಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವೇದಿಕೆಯ ಮೇಲಿದ್ದವರನ್ನಷ್ಟೇ ಯಾವಾಗಲೂ ಸ್ವಾಗತ ಮಾಡುತ್ತಾರೆ. ಡಿ.ಕೆ ಶಿವಕುಮಾರ್ ಎಲ್ಲಿದ್ದಾರೆ? ಅವರು ಆಗಲೇ ಬೆಂಗಳೂರಿಗೆ ಹೊರಟು ಹೋದರು. ಅವರನ್ನು ಹೇಗೆ ನಾನು ಈಗ ಸ್ವಾಗತ ಮಾಡಲಿ ಎಂದು ಪ್ರಶ್ನಿಸಿದ್ದಾರೆ.
ಮಾತು ಮುಂದುವರಿಸಿದ ಸಿದ್ದರಾಮಯ್ಯ, 'ಡಿಕೆಶಿಯವರು ಕಾರ್ಯಕ್ರಮಕ್ಕೆ ಬಂದಿದ್ದು ನಿಜ. ಆದರೆ, ಕಾರಣ ನಿಮಿತ್ತ ಬೆಂಗಳೂರಿಗೆ ಹೊರಟು ಹೋಗಿದ್ದಾರೆ. ಯಾವಾಗಲೂ ವೇದಿಕೆಯ ಮೇಲಿದ್ದವರಿಗೆ ಸ್ವಾಗತ ಕೋರಲಾಗುತ್ತದೆಯೇ ಹೊರತು ಮನೆಯಲ್ಲಿ ಕುಳಿತವರಿಗಲ್ಲ' ಎಂದು ಹೇಳುವ ಮೂಲಕ ಡಿಕೆಶಿಯವರನ್ನು ಸ್ವಾಗತಿಸದಿದ್ದಕ್ಕೆ ಸಮರ್ಥನೆ ನೀಡಿದ್ದಾರೆ.
PublicNext
19/07/2025 08:11 pm