", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1752940399-han-copy.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಬಳಿಕ ಸಚಿವ ಸಂತೋಷ್ ಲಾಡ್ ಅವರ ಸಂಡೂರು ಕ್ಷೇತ್ರದಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ...Read more" } ", "keywords": "Sandur illegal mining, Santosh Lad, Tukaram involvement, Bangaru Hanumanthaiah statement, Bengaluru news, Karnataka mining controversy.", "url": "https://dashboard.publicnext.com/node" }
ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಬಳಿಕ ಸಚಿವ ಸಂತೋಷ್ ಲಾಡ್ ಅವರ ಸಂಡೂರು ಕ್ಷೇತ್ರದಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಂತೋಷ್ ಲಾಡ್ ಅವರಿಗೆ ಜನರ ಹಿತಾಸಕ್ತಿ ಇದ್ದರೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಜನಪ್ರತಿನಿಧಿಗಳ ಬೇನಾಮಿಗಳಾದ ಗಡಾದ ರಮೇಶ್, ಆದಿನಾರಾಯಣ, ಜಯರಾಮ್, ಸಿದ್ದನಗೌಡ ಅವರು ನಕಲಿ ಪರ್ಮಿಟ್ ಬಳಸುತ್ತಿದ್ದಾರೆ ಎಂದು ಆರೋಪಿಸಿದರು. ಅಕ್ರಮ ಗಣಿಗಾರಿಕೆ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ಕೊಡುವುದಾಗಿ ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಅಕ್ರಮ ಗಣಿಗಾರಿಕೆ ನೆಪ ಇಟ್ಟುಕೊಂಡು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಬಳಿಕ ಸರಕಾರದ ನೇತೃತ್ವ ವಹಿಸಿದ್ದಾರೆ, ಆದರೂ ಎಲ್ಲೆಂದರಲ್ಲಿ ಅಕ್ರಮ ಗಣಿಗಾರಿಕೆ ಮುಂದುವರೆದಿದೆ. ಸಂಸದ ತುಕಾರಾಂ, ಶಾಸಕಿ ಅನ್ನಪೂರ್ಣ ಮತ್ತು ಸಂತೋಷ್ ಲಾಡ್ ಮಾರ್ಗದರ್ಶನದಡಿ ತಹಶೀಲ್ದಾರ್, ಪೊಲೀಸ್ ಮತ್ತಿತರ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದೂ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂಡಿಯಾದಿಂದ ಗೋ ಮಾಂಸ ರಫ್ತಾಗ್ತಿದೆ ಅಂತ ಸಂತೋಷ್ ಲಾಡ್ ಹೇಳ್ತಾರೆ. ಒಂದು ಕೇಜಿ ವಿದೇಶಕ್ಕೆ ಗೋ ಮಾಂಸ ರಫ್ತಾಗ್ತಿದ್ರೆ, ಅವರು ಹೇಳಿದಂತೆ ಮಾಡಲು ನಾನು ಸಿದ್ದ ಎಂದು ಸವಾಲು ಹಾಕಿದ್ರು. ಸಚಿವ ಸಂತೋಷ್ ಲಾಡ್ ಫೌಂಡೇಶನ್ ಇದೆ, VSL ಗಣಿ ಕಂಪನಿ ಇದೆ. ಅಕ್ರಮ ಗಣಿಗಾರಿಕೆ ಇರೋದ್ರಿಂದ ಅದರ ನಷ್ಟ ಬರಿಸಿಕೊಡಬೇಕು. ರಿಪಬ್ಲಿಕ್ ಆಫ್ ಬಳ್ಳಾರಿ ಅಂತಿದ್ರು, ಈಗ ಸಂತೋಷ್ ಲಾಡ್ ಅವರು ಸಂಡೂರು ನೋಡಿಕೊಳ್ಳಪ್ಪ ಎಂದು ತಿರುಗೇಟು ನೀಡಿದ್ರು.
PublicNext
19/07/2025 09:23 pm