", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/235762-1752944293-Untitled-design---2025-07-19T222800.566.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬ್ಯಾಂಕಾಕ್: ಥಾಯ್ಲೆಂಡ್ ಮೂಲದ ಮಹಿಳೆಯ ಫೋನ್‌ನಲ್ಲಿ ಸುಮಾರು 80,000ಕ್ಕೂ ಅಧಿಕ ಜನರ ನಗ್ನ ಫೋಟೋಗಳು ಹಾಗೂ ಬೌದ್ಧ ಸನ್ಯಾಸಿಗಳ ವಿಡಿಯೋಗಳು ಪತ...Read more" } ", "keywords": "Thailand woman arrested nude photos, Buddhist monks nude photos scandal, Thailand police crackdown, Over 80000 nude photos seized, Thailand child safety laws, Woman held for nude photo possession", "url": "https://dashboard.publicnext.com/node" }
ಬ್ಯಾಂಕಾಕ್: ಥಾಯ್ಲೆಂಡ್ ಮೂಲದ ಮಹಿಳೆಯ ಫೋನ್‌ನಲ್ಲಿ ಸುಮಾರು 80,000ಕ್ಕೂ ಅಧಿಕ ಜನರ ನಗ್ನ ಫೋಟೋಗಳು ಹಾಗೂ ಬೌದ್ಧ ಸನ್ಯಾಸಿಗಳ ವಿಡಿಯೋಗಳು ಪತ್ತೆ ಆಗಿವೆ. ಈ ಹಿನ್ನೆಲೆಯಲ್ಲಿ ಥಾಯ್ಲೆಂಡ್ ಪೊಲೀಸರು 35 ವರ್ಷ ವಯಸ್ಸಿನ ವಿಲಾವನ್ ಎಮ್ಹಾವತ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಈ ಘಟನೆ ಕಂಡು ಥಾಯ್ಲೆಂಡ್ ಬೆಚ್ಚಿ ಬಿದ್ದಿದೆ.
ಸ್ಥಿತಿವಂತರನ್ನು ತನ್ನತ್ತ ಸೆಳೆದು ಅವರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿ ಆ ಮೂಲಕ ದುಡ್ಡು ಮಾಡೋದೇ ಈಕೆಯ ಕಾಯಕ. ಈಕೆಯ ದಂಧೆಯ ಜಾಲಕ್ಕೆ ಸಿಲುಕಿದ ಸಾವಿರಾರು ಮಂದಿಯಲ್ಲಿ ಹಲವರನ್ನು ಈಕೆ ಬ್ಲಾಕ್‌ಮೇಲ್ ಕೂಡ ಮಾಡಿದ್ದಾಳೆ ಎಂದು ವರದಿಯಾಗಿದೆ. ಇದರಿಂದ ಈಕೆ ಇಲ್ಲಿಯವರೆಗೆ 102 ಕೋಟಿ ರೂ. ಸುಲಿಗೆ ಮಾಡಿದ್ದಾಳೆ ಎನ್ನಲಾಗಿದೆ.
ʻಮಿಸ್ಡ್ ಗಾಲ್ಫ್ʼ ಎಂದೇ ಖ್ಯಾತಿ ಪಡೆದಿರುವ ವಿಲಾವತ್ 9 ಸನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು, ಬೌದ್ಧ ಸನ್ಯಾಸಿಗಳ ರಾಸಲೀಲೆಯ ವೀಡಿಯೊ ಹೊರಗೆ ಬರುತ್ತಿದ್ದಂತೆ ಬುದ್ದರ ಪ್ರಾಬಲ್ಯವಿರುವ ದೇಶದ ಜನತೆ ಬೆಚ್ಚಿಬಿದ್ದಿದ್ದಾರೆ. 9 ಬೌದ್ಧ ಸನ್ಯಾಸಿಗಳನ್ನು ಸನ್ಯಾಸತ್ವದಿಂದ ವಜಾಗೊಳಿಸಲಾಗಿದೆ.
ಉತ್ತರ ಬ್ಯಾಂಕಾಕ್‌ನಲ್ಲಿರುವ ನೋಂಥಬುರಿಯಲ್ಲಿ ರಾಯಲ್ ಥಾಯ್ ಪೊಲೀಸ್ ಕೇಂದ್ರ ತನಿಖಾ ಬ್ಯೂರೋ ವಿಲಾವನ್ ಎಮ್ಸಾವತ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯ ಫೋನ್ ಪರಿಶೀಲನೆ ನಡೆಸಿದ ಬಳಿಕ ಬೌದ್ಧ ಬಿಕ್ಕುಗಳೊಂದಿಗೆ ಸಂಪರ್ಕ ಹೊಂದಿದ್ದ ವಿಡಿಯೋಗಳು ಸೇರಿ 80 ಸಾವಿರ ಮಂದಿಯ ಬೆತ್ತಲೆ ಫೋಟೊಗಳು ಲಭ್ಯವಾಗಿದೆ. ಅವರಿಂದ ಬ್ಲ್ಯಾಕ್ ಮೇಲ್ ಮಾಡಿರುವುದು ದೃಢಪಟ್ಟಿದೆ. ಕೆಲವು ಬೌದ್ಧ ಬಿಕ್ಕುಗಳು ಈಕೆಯ ಬ್ಲಾಕ್ ಮೇಲ್ ನಿಂದ ರೋಸಿಹೋಗಿ ದೇಗುಲಗಳ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ.
PublicNext
19/07/2025 10:19 pm