", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/463655-1752998148-WhatsApp-Image-2025-07-20-at-1.18.34-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೊಚ್ಚಿ: “ರಾಷ್ಟ್ರೀಯ ಭದ್ರತೆಗಾಗಿ ನನ್ನ ನಿಲುವು ಸ್ಪಷ್ಟ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕೊಚ್ಚಿಯಲ್ಲಿ ನಡೆದ ಸಭೆಯಲ್ಲಿ ಮಾ...Read more" } ", "keywords": "Shashi Tharoor on nation over party, Congress MP Shashi Tharoor, nation first politics, Shashi Tharoor statement, Indian politics news, Congress party news, Shashi Tharoor quotes, nation over party politics, Indian parliament news. ", "url": "https://dashboard.publicnext.com/node" }
ಕೊಚ್ಚಿ: “ರಾಷ್ಟ್ರೀಯ ಭದ್ರತೆಗಾಗಿ ನನ್ನ ನಿಲುವು ಸ್ಪಷ್ಟ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕೊಚ್ಚಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಪಕ್ಷಕ್ಕಿಂತ ದೇಶ ಪ್ರಮುಖ. ಭಾರತ ಸತ್ತರೆ ಯಾರೂ ಉಳಿಯಲ್ಲ. ರಾಷ್ಟ್ರಕ್ಕೇ ಮೊದಲ ಆದ್ಯತೆ” ಎಂದು ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಮೋದಿ ಸರ್ಕಾರವನ್ನು ಹೊಗಳಿದ್ದಕ್ಕಾಗಿ ಪಕ್ಷದೊಳಗೇ ಟೀಕೆಗೆ ಒಳಗಾಗಿರುವ ತರೂರ್, ಪಕ್ಷದ ಮೇಲೆ ನಿಷ್ಠೆ ಇದ್ದರೂ ರಾಷ್ಟ್ರ ಭದ್ರತೆ ಕುರಿತು ಹಿತದೃಷ್ಟಿಯಿಂದ ಇತರ ಪಕ್ಷಗಳೊಂದಿಗೆ ಸಹಕರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ವಿಡಿಯೋ ಹಂಚಿಕೊಂಡಿರುವ ಅವರು, “ಇತ್ತೀಚೆಗೆ ಗಡಿಗಳಲ್ಲಿ ನಡೆದ ಘಟನೆಯಿಂದಾಗಿ ನಾನು ಸರ್ಕಾರ ಹಾಗೂ ಸೇನೆಯ ಬೆಂಬಲಿಗೆ ನಿಂತಿದ್ದೇನೆ. ಇದು ದೇಶದ ಹಿತಕ್ಕೆ ತಕ್ಕ ನಿಲುವು. ನಾನು ಎಲ್ಲ ಭಾರತೀಯರ ಪರವಾಗಿ ಮಾತನಾಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
PublicNext
20/07/2025 01:26 pm