", "articleSection": "Politics,Government,International", "image": { "@type": "ImageObject", "url": "https://prod.cdn.publicnext.com/s3fs-public/387839-1753001892-Untitled-design---2025-07-20T143154.365.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಿಸಲು ಚೀನಾ ಅಧಿಕೃತ ಚಾಲನೆ ನೀಡಿದ್ದು, ಇದು ಭಾರತ ಹಾಗೂ ಬಾಂಗ್ಲಾದೇಶದ...Read more" } ", "keywords": "China, Dragon Dam project, Brahmaputra River, India, Bangladesh, water war, geopolitical challenge, mega dam, ecological concerns, security concerns. ", "url": "https://dashboard.publicnext.com/node" } ಚೀನಾದ ಡ್ರ್ಯಾಗನ್ ಡ್ಯಾಂ ಪ್ರಾಜೆಕ್ಟ್ ಆರಂಭ : ಭಾರತ-ಬಾಂಗ್ಲಾದೇಶಕ್ಕೆ ಹೊಸ ಆತಂಕ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೀನಾದ ಡ್ರ್ಯಾಗನ್ ಡ್ಯಾಂ ಪ್ರಾಜೆಕ್ಟ್ ಆರಂಭ : ಭಾರತ-ಬಾಂಗ್ಲಾದೇಶಕ್ಕೆ ಹೊಸ ಆತಂಕ!

ನವದೆಹಲಿ : ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಿಸಲು ಚೀನಾ ಅಧಿಕೃತ ಚಾಲನೆ ನೀಡಿದ್ದು, ಇದು ಭಾರತ ಹಾಗೂ ಬಾಂಗ್ಲಾದೇಶದ ಪಾಲಿಗೆ ಹೊಸ ಆತಂಕದ ಸೂಚನೆಯಾಗಿದೆ.

ಈ ನದಿಯ ಮೇಲ್ಭಾಗವಾಗಿರುವ ಯಾರ್ಲುಂಗ್ ತ್ಸಾಂಗ್ಪೊ (Yarlung Tsangpo) ನದಿಗೆ ಟಿಬೆಟ್‌ನ ನಿಂಗ್ಚಿ ಪ್ರಾಂತ್ಯದಲ್ಲಿ ಡ್ಯಾಂ ನಿರ್ಮಾಣ ಕಾರ್ಯ ಆರಂಭವಾಗಿದೆ. ಯಾಜಿಯಾಂಗ್ ಗ್ರೂಪ್ ಈ ಮೆಗಾ ಯೋಜನೆ ಅಭಿವೃದ್ಧಿಪಡಿಸುತ್ತಿದ್ದು, ಡ್ಯಾಂನ ಮೂಲಕ ವರ್ಷಕ್ಕೆ ಸುಮಾರು 300 ಬಿಲಿಯನ್ ಕಿಲೋವ್ಯಾಟ್‌ಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆ ಗುರಿಯಾಗಿದೆ.

ಈ ಯೋಜನೆಗೆ ಚೀನಾದ ಬೀಜಿಂಗ್ ಸರ್ಕಾರ ಜನವರಿಯಲ್ಲೇ ಅನುಮೋದನೆ ನೀಡಿತ್ತು. ಆದರೆ ಇದು ಟಿಬೆಟಿಯನ್ ಪ್ರದೇಶಕ್ಕೂ ಮೀರಿ ಭಾರತ ಮತ್ತು ಬಾಂಗ್ಲಾದೇಶದ ನದೀ ಪರಿಸರ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕವಿದೆ.

ಈ ಕಾರಣದಿಂದ ಭಾರತ ಯೋಜನೆಯ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸುತ್ತಿತ್ತು. ಇತ್ತೀಚೆಗಷ್ಟೇ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.

ಬ್ರಹ್ಮಪುತ್ರ ನದಿ ಕೇವಲ ಒಂದು ನದಿ ಮಾತ್ರವಲ್ಲ, ಇದು ಈಶಾನ್ಯ ಭಾರತದ ಲಕ್ಷಾಂತರ ಜನರ ಜೀವನಾಡಿಯಾಗಿದ್ದು, ಈ ನದಿಯ ಮೇಲೆ ಚೀನಾ ಇದೇ ಮೊದಲ ಬಾರಿಗೆ ಅಣೆಕಟ್ಟು ಕಟ್ಟುತ್ತಿಲ್ಲ. ಈಗಾಗಲೇ ಹಲವು ಸಣ್ಣ ಅಣೆಕಟ್ಟುಗಳು ನಿರ್ಮಿಸಲಾಗಿದೆ. ಈ ರೀತಿಯ ನಿರ್ಮಾಣಗಳು ಭಾರತ-ಚೀನಾ ನಡುವಿನ ನದೀ ನೀತಿ ಘರ್ಷಣೆಯ ಪ್ರಮುಖ ಅಂಶವಾಗಿದೆ.

ಇದೀಗ ಈ ಮೆಗಾ ಡ್ಯಾಂ ಯೋಜನೆ ಭಾರಿ ಪರಿಸರ ಮತ್ತು ರಾಜಕೀಯ ಪರಿಣಾಮ ಉಂಟುಮಾಡಲಿದೆ ಎಂಬುದಾಗಿ ತಜ್ಞರು ಎಚ್ಚರಿಸುತ್ತಿದ್ದಾರೆ. ಟಿಬೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಅಣೆಕಟ್ಟು ಭವಿಷ್ಯದಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಬಾಂಗ್ಲಾದೇಶದಲ್ಲಿ ಪ್ರವಾಹ, ಭೂಕುಸಿತ ಮತ್ತು ನೀರಿನ ಪ್ರಮಾಣದ ಏರುಪೇರುಗಳಿಗೆ ಕಾರಣವಾಗಬಹುದೆಂದು ಅಂದಾಜಿಸಲಾಗಿದೆ.

Edited By : Abhishek Kamoji
PublicNext

PublicNext

20/07/2025 02:29 pm

Cinque Terre

15.46 K

Cinque Terre

0