", "articleSection": "Politics,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1753013697-param.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಧರ್ಮಸ್ಥಳದಲ್ಲಿ ಅಸಹಜ ಸಾವು ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸ...Read more" } ", "keywords": "Bengaluru SIT formation, Dharmasthala bodies case, Home Minister Parameshwara reaction, investigation team, crime probe, Karnataka government response.", "url": "https://dashboard.publicnext.com/node" }
ಬೆಂಗಳೂರು : ಧರ್ಮಸ್ಥಳದಲ್ಲಿ ಅಸಹಜ ಸಾವು ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಧರ್ಮಸ್ಥಳದಲ್ಲಿ ಒಬ್ಬ ವ್ಯಕ್ತಿ ದೂರು ಕೊಟ್ಟಿದ್ದಾರೆ, ನ್ಯಾಯಾಧೀಶರ ಮುಂದೆ ೧೬೪ ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ, ಸ್ಥಳೀಯವಾಗಿ ತನಿಖೆ ಮಾಡಿ ವಿವರವಾದ ವರದಿ ಕೊಡಿ ಎಂದು ಆದೇಶಿಸಿದ್ದೆವು, ಅದರ ಮದ್ಯಯೆ ವೈಯಕ್ತಿಕವಾಗಿ ಬೇರೆ ಬೇರಿ ರೀತಿಯಲ್ಲಿ ಸಿಎಂ, ಗೃಹ ಸಚಿವರ ಬಗ್ಗೆ ಏನೇನೊ ಮಾತಾಡಿದ್ದಾರೆ ಆದ್ರು ಅದನ್ನ ಸಹಿಸಿಕೊಂಡಿದ್ವಿ, ನ್ಯಾಯಯುತವಾಗಿ ತನಿಖೆ ನಡೆಸುವಂತೆ ಸೂಚನೆ ಕೊಟ್ಟಿದ್ದೇವೆ. ಹೆಚ್ಚಿನ ಮಟ್ಟದಲ್ಲಿ ತನಿಖೆ ಆಗಬೇಕು ಅಂತ ಹೇಳಿ ಬಹಳಷ್ಟು ಜನ ವ್ಯಾಖ್ಯಾನ ಮಾಡ್ತಿದ್ರು. ಈ ಪ್ರಕರಣದಲ್ಲಿ ಸರ್ಕಾರ ಮುಚ್ಚಿಟ್ಟುಕೊಳ್ಳಂತದ್ದು ಏನಿಲ್ಲಾ, ಸರ್ಕಾರ ಯಾರನ್ನ ರಕ್ಷಣೆ ಮಾಡಬೇಕಂತ ಏನಿಲ್ಲಾ, ನ್ಯಾಯ ದೊಕಬೇಕಷ್ಟೆ, ಅದಕ್ಕೆ ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಿದ್ದೇವೆ ಎಂದರು.
SIT ರಚನೆ ಬಗ್ಗೆ ನಾನು ಸಿಎಂ ಡಿಜಿಪಿ ನಾವೆಲ್ಲಾ ಚರ್ಚೆ ಮಾಡಿ ತೀರ್ಮಾನ ಕೈಗೊಂಡಿದ್ದೇವೆ, ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದ್ದೇವೆ, ಎಸ್ಐಟಿಯವರಿಗೆ ದೂರು ಏನು ಬಂದಿದೆ ಅದರ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದೇವೆ, ತನಿಖೆಗೆ ಕಲಾವಕಾಶದ ಮಿತಿ ನಿಗದಿ ಮಾಡಿಲ್ಲಾ, ಆದಷ್ಟು ಬೇಗ ಸರ್ಕಾರಕ್ಕೆ ವರದಿ ಕೊಡುವಂತೆ ಸೂಚಿಸಿದ್ದೇವೆ ಪ್ರಕರಣದ ತನಿಖೆಯನ್ನ ಡಿಜಿಪಿಗೆ ತಿಳಿಸಬೇಕು, ಅಲ್ಲಿ ಸಿಕ್ಕಿರುವ ತಲೆಬುರುಡೆಯೊ, ಕಾಲೊ ಕೈಯೊ ಅದರ ಬಗ್ಗೆ ತನಿಖೆ ಮಾಡ್ತಾರೆ ಅಲ್ಲಿ ಏನು ದೂರು ಬಂದಿದೆ ಅದರ ಮೇಲೆ ತನಿಖೆ ಮಾಡಲಾಗುತ್ತೆ, ಈ ಪ್ರಕರಣದಲ್ಲಿ ಯಾರ ಒತ್ತಡಕ್ಕೂ ಮಣಿದಿಲ್ಲಾ, ನ್ಯಾಯ ದೊರಕಬೇಕು ಅನ್ನೊ ಉದ್ದೇಶದಿಂದ ತನಿಖೆಗೆ ಆದೇಶ ಮಾಡಿದ್ದೇವೆ ಎಂದರು.
ಧರ್ಮರಾಜಕಾರಣ ಬೆರೆಸಲಾಗ್ತಿದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆ ವರದಿ ಬರಲಿ, ಆಗ ಗೊತ್ತಾಗುತ್ತೆ ರಾಜಕಾರಣ ಏನು ಅಂತ ಆ ಬಗ್ಗೆ ಆಮೇಲೆ ಮಾತಾಡೋಣಾ ಎಂದರು.
PublicNext
20/07/2025 05:45 pm