", "articleSection": "Crime,International,Accident,Viral", "image": { "@type": "ImageObject", "url": "https://prod.cdn.publicnext.com/s3fs-public/235762-1753093401-WhatsApp-Image-2025-07-21-at-3.21.43-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಢಾಕಾ: ಬಾಂಗ್ಲಾದೇಶ ವಾಯುಸೇನೆಯ ಫೈಟರ್ ಜೆಟ್ ಪತನವಾಗಿದ್ದು ಘಟನೆಯಲ್ಲಿ ಓರ್ವ ಮೃತಪಟ್ಟು ಕನಿಷ್ಟ 100 ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಢಾ...Read more" } ", "keywords": "Bangladesh Air Force fighter jet crash, BAF fighter jet crash, fighter jet accident, plane crash Bangladesh, Bangladesh military plane crash, fighter jet incident", "url": "https://dashboard.publicnext.com/node" } VIDEO: ಬಾಂಗ್ಲಾ ವಾಯುಸೇನೆಯ ಫೈಟರ್ ಜೆಟ್ ಪತನ - ಓರ್ವ ಸಾವು ಹಲವರಿಗೆ ಗಾಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಬಾಂಗ್ಲಾ ವಾಯುಸೇನೆಯ ಫೈಟರ್ ಜೆಟ್ ಪತನ - ಓರ್ವ ಸಾವು ಹಲವರಿಗೆ ಗಾಯ

ಢಾಕಾ: ಬಾಂಗ್ಲಾದೇಶ ವಾಯುಸೇನೆಯ ಫೈಟರ್ ಜೆಟ್ ಪತನವಾಗಿದ್ದು ಘಟನೆಯಲ್ಲಿ ಓರ್ವ ಮೃತಪಟ್ಟು ಕನಿಷ್ಟ 100 ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಢಾಕಾ ನಗರದ ಉತ್ತರ ಭಾಗದ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನ ಕ್ಯಾಂಪಸ್‌ಗೆ ಫೈಟರ್ ಜೆಟ್ ಅಪ್ಪಳಿಸಿದೆ. ಚೀನಾ ನಿರ್ಮಿತ F-7 ಜೆಟ್ ಇದಾಗಿದೆ. ಇಂದು ಮಧ್ಯಾಹ್ನ 1:06ರ ಸುಮಾರಿಗೆ ಜೆಟ್ ಪತನಗೊಂಡಿದ್ದನ್ನು ಕಂಡ ಢಾಕಾ ನಿವಾಸಿಗಳು ಆತಂಕಗೊಂಡಿದ್ದಾರೆ.

ಅಪಘಾತದ ಸಮಯದಲ್ಲಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಇದ್ದರು ಎಂದು ವರದಿಯಾಗಿದೆ. ತುರ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಲು ಧಾವಿಸಿದಾಗ ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಏರುತ್ತಿರುವು ದೃಶ್ಯದಲ್ಲಿ ಕಾಣುತ್ತಿದೆ.

ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿಯು ಈ ಜೆಟ್ ವಾಯುಪಡೆಗೆ ಸೇರಿದ್ದು ಎಂದು ದೃಢಪಡಿಸಿದೆ, ಆದರೂ ಹೆಚ್ಚಿನ ವಿವರಗಳನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿ ಲಿಮಾ ಖಾನ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/07/2025 03:53 pm

Cinque Terre

20.44 K

Cinque Terre

0

ಸಂಬಂಧಿತ ಸುದ್ದಿ