", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/52563-1753165290-WhatsApp-Image-2025-07-22-at-11.40.53-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ಎಫ್‌ಬಿಐ ಏಜೆಂಟ್‌ಗಳು ಬಂಧಿಸಿ ಕರೆದೊಯ್ಯುತ್ತಿರುವ ಎಐ (ಆರ್ಟಿಫೀಶಿಯಲ್ ಇಂಟಲಿಜೆ...Read more" } ", "keywords": "Donald Trump, AI-generated video, Barack Obama arrest, FBI, Oval Office, deepfake controversy, Trump Truth Social, Obama fake arrest video", "url": "https://dashboard.publicnext.com/node" }
ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ಎಫ್‌ಬಿಐ ಏಜೆಂಟ್‌ಗಳು ಬಂಧಿಸಿ ಕರೆದೊಯ್ಯುತ್ತಿರುವ ಎಐ (ಆರ್ಟಿಫೀಶಿಯಲ್ ಇಂಟಲಿಜೆನ್ಸ್ ) ನಿರ್ಮಿತ ವಿಡಿಯೋವೊಂದನ್ನು ಹಾಲಿ ಅಧ್ಯಕ್ಷ ಟ್ರಂಪ್ ಹಂಚಿಕೊಂಡಿದ್ದಾರೆ.
ಸದ್ಯ ಟ್ರಂಪ್ ಹಂಚಿಕೊಂಡ ವಿಡಿಯೋ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಟ್ರಂಪ್ ಹೇಳಿಕೆ, ಸ್ಪಷ್ಟನೆ ಕೂಡ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋ ಮೂಲಕ ಟ್ರಂಪ್ ಕೆಲ ಸೂಚನೆ ಹಾಗೂ ಸುಳಿವು ನೀಡಿದ್ರಾ ಅನ್ನೋ ಅನುಮಾನ ಮೂಡಿದೆ.
ಡೋನಾಲ್ಡ್ ಟ್ರಂಪ್ ಹಂಚಿಕೊಂಡ ವಿಡಿಯೋದಲ್ಲಿ ಎಫ್‌ಬಿಐ ಅಧಿಕಾರಿಗಳು ದಿಢೀರ್ ಓವಲ್ ಕಚೇರಿಗೆ ಎಂಟ್ರಿಕೊಟ್ಟಿದ್ದಾರೆ. ಡೋನಾಲ್ಡ್ ಟ್ರಂಪ್ ಹಾಗೂ ಓಬಾಮ ಮಾತುಕತೆಯಲ್ಲಿರುವಾಗ ಎಂಟ್ರಿಕೊಟ್ಟ ಅಧಿಕಾರಿಗಳು ಓಬಾಮ್ ಹಿಡಿದು ನೆಲಕ್ಕೆ ಮುಖ ಮಾಡಿ ಮಲಗುವಂತೆ ಹೇಳಿ ಕೈಗಳಿಗೆ ಕೋಳ ತೊಡಸಿದ್ದಾರೆ. ಒಬಾಮ ಬಂಧಿಸಿ ಕರೆದೊಯ್ಯುತ್ತಿರುವ ಎಐ ಸೃಷ್ಟಿಸಿದ ವಿಡಿಯೋ ಇದಾಗಿದೆ.
ಯಾರೂ ಕಾನೂನಿಂಗಿಂತ ದೊಡ್ಡವರಲ್ಲ ಎಂದು ಹೇಳುತ್ತಿರುವಾಗಲೇ ಈ ಬಂಧನವಾಗುವಂತೆ ವಿಡಿಯೋ ನಿರ್ಮಿಸಲಾಗಿದೆ. ಈ ವಿಡಿಯೋವನ್ನು ಡೋನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟ್ರಂಪ್ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ವಿವಾದಗಳು ಸೃಷ್ಟಿಯಾಗಿದೆ. ಬರಾಕ್ ಒಬಾಮ ಬಂಧನ ವಿಡಿಯೋ ಎಐ ವಿಡಿಯೋ ಹಂಚಿಕೊಂಡಿದ್ದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಅಮೆರಿಕದಲ್ಲಿ 2ನೇ ಬಾರಿಗೆ ಅಧ್ಯಕ್ಷರಾದ ಡೋನಾಲ್ಡ್ ಟ್ರಂಪ್, ಅಮೆರಿಕ ಇತಿಹಾಸದಲ್ಲೇ ಕಂಡು ಕೇಳರಿಯದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿದೆ.
ಡೋನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು ಎಐ ವಿಡಿಯೋ. ಆದರೆ ಈ ವಿಡಿಯೋ ಎಐ ಅನ್ನೋದನ್ನು ಸ್ಪಷ್ಟಪಡಿಸಿಲ್ಲ. ಎಐ ವಿಡಿಯೋಗಳನ್ನು ಹಂಚಿಕೊಳ್ಳವು ಮೂಲಕ ಡೋನಾಲ್ಡ್ ಟ್ರಂಪ್ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಮರಿಕ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಪೋಸ್ಟ್ ಮಾಡುತ್ತಿರುವುದು ಗೌರವ ತರುವ ವಿಚಾರವಲ್ಲ. ಕನಿಷ್ಠ ಎಐ ವಿಡಿಯೋ ಎಂದು ಉಲ್ಲೇಖಿಸಬೇಕಿತ್ತು. ಅದು ಕೂಡ ಮಾಡಿಲ್ಲ ಎಂದು ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.
PublicNext
22/07/2025 12:55 pm