", "articleSection": "Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/454739-1753169483-Untitled-design-(24).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Umesh Mangalore" }, "editor": { "@type": "Person", "name": "mudakanagouda.p" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಧರ್ಮಸ್ಥಳದ ಸುತ್ತಮುತ್ತ ಶವ ಹೂತಿಟ್ಟ ಕೇಸ್ ಬೆನ್ನಲ್ಲೇ ಕೇರಳದಲ್ಲೂ ದೂರು ದಾಖಲಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂ ಪೊಲೀಸ್ ಠಾ...Read more" } ", "keywords": "Dharmasthala corpse burial case, Kerala similar complaint, dead body buried, mysterious burial, Dharmasthala case similarity, Kerala police investigation, corpse burial controversy, Dharmasthala case update. ", "url": "https://dashboard.publicnext.com/node" }
ಮಂಗಳೂರು: ಧರ್ಮಸ್ಥಳದ ಸುತ್ತಮುತ್ತ ಶವ ಹೂತಿಟ್ಟ ಕೇಸ್ ಬೆನ್ನಲ್ಲೇ ಕೇರಳದಲ್ಲೂ ದೂರು ದಾಖಲಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಧರ್ಮಸ್ಥಳ ಮೂಲದ ಹಾಲಿ ಕಣ್ಣೂರು ನಿವಾಸಿ ಅನೀಶ್ ಎಂಬುವವರು ದೂರು ನೀಡಿದ್ದಾರೆ. ಧರ್ಮಸ್ಥಳ ಜಾಗದ ವಿವಾದದ ಕಾರಣಕ್ಕೆ ಅಪಘಾತವೆಸಗಿ ಹತ್ಯೆ ಆರೋಪವನ್ನು ಈ ದೂರಿನಲ್ಲಿ ಮಾಡಲಾಗಿದೆ. ಅಂದಹಾಗೇ ಈ ಘಟನೆ ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಮುಂಡ್ಕೂರು ಬಳಿ ಕಾರು ಗುದ್ದಿಸಿ ಹತ್ಯೆ ಆರೋಪ ಮಾಡಲಾಗಿದ್ದು ಹಲವು ವರ್ಷಗಳ ಹಿಂದೆ ಅನೀಶ್ ತಂದೆ ಕೆ.ಜೆ.ಜಾಯ್ ಹತ್ಯೆ ನಡೆದಿತ್ತು ಎನ್ನಲಾಗಿದೆ.
ಧರ್ಮಸ್ಥಳದಲ್ಲಿ ಭೂಮಿ ಕಬಳಿಸಲು ಹತ್ಯೆ ನಡೆಸಲಾಗಿದೆ ಎಂದು ದೂರು ನೀಡಲಾಗಿದ್ದು ಇದ್ರಲ್ಲಿ ಕುಟುಂಬದ 24 ಎಕರೆ ಭೂಮಿಯನ್ನು 18 ಲಕ್ಷ ರೂ.ಗೆ ಅವರಿಗೆ ನೀಡಿದ್ದೆವು. ಉಳಿದ 20 ಎಕರೆ ಭೂಮಿಯನ್ನೂ ಮಾರಾಟ ಮಾಡಲು ಬೆದರಿಕೆ ಇತ್ತು. ಮೂಡಬಿದಿರೆ ಠಾಣೆಯಲ್ಲಿ ಕೇಸ್ ಕೊಟ್ಟರೂ ಅಪಘಾತ ಅಂತ ಪ್ರಕರಣ ಮುಚ್ಚಿದ್ದ ಆರೋಪ ಮಾಡಲಾಗಿದೆ. ಈ ಮೂಲಕ ಕರ್ನಾಟಕ ಸರ್ಕಾರ ಎಸ್ಐಟಿ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ಮತ್ತೊಂದು ದೂರು ದಾಖಲಾಗಿದೆ.
PublicNext
22/07/2025 01:02 pm