ಸದ್ಯ ಬಾಲಿವುಡ್‌ನಲ್ಲಿ ‘ಸೈಯಾರ’ ಚಿತ್ರದ ಸದ್ದು ಜೋರಾಗಿದೆ. ಬಿಡುಗಡೆಯಾಗಿ ನಾಲ್ಕು ದಿನಗಳೊಳಗೆ ₹100 ಕೋಟಿ ಗಳಿಕೆ ಕಂಡಿರುವ ಚಿತ್ರ, ಕೇವಲ ಒಂದು ವಾರದಲ್ಲಿ, 165.46 ಕೋಟಿ ರೂ.ಗಳನ್ನು ಸಂಗ್ರಹಿಸಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಇನ್ನೂ ಈ ಚಿತ್ರದ ಮೇಲಿನ ಕ್ರೇಜ್ ಜನರಲ್ಲಿ, ವಿಶೇಷವಾಗಿ ಯುವಕರಲ್ಲಿ ಹೆಚ್ಚಿದೆ.ಚಿತ್ರ ನೋಡಿದ ನಂತರ ಜನರು ಥಿಯೇಟರ್‌ನಲ್ಲಿ ಅಳುವ ಬಗ್ಗೆಯೂ ಅನೇಕ ವರದಿಗಳಿವೆ.
ಇದರ ನಡುವೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ, 'ಸೈಯಾರಾ’ ಚಿತ್ರವನ್ನು ನೋಡಿದ ನಂತರ, ಇಬ್ಬರು ಹುಡುಗರು ತಮ್ಮ ಗೆಳತಿಯರಿಗಾಗಿ ಜಗಳವಾಡಿದರು. ಚಿತ್ರಮಂದಿರದ ಹೊರಗೆ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಇಬ್ಬರು ಹುಡುಗರ ನಡುವಿನ ಜಗಳದ ವೀಡಿಯೊವನ್ನು ಮಾಡಿದ್ದಾರೆ.
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇನ್ನೂ ಈ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ವಿಡಿಯೋ ಮಾತ್ರ ಭರ್ಜರಿಯಾಗಿ ವೈರಲ್ ಆಗುತ್ತಿದೆ.
PublicNext
26/07/2025 02:38 pm