", "articleSection": "Crime,Government", "image": { "@type": "ImageObject", "url": "https://prod.cdn.publicnext.com/s3fs-public/405356-1756966375-bada.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶ್ರೀನಿವಾಸಪುರ : ರಾಶಿ ರಾಶಿ ಔಷಧಿಗಳನ್ನು ಕಸದಲ್ಲಿ ಬಿಸಾಡುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಘಟನೆ ಕೋಲಾರದಲ್ಲಿ ನಡೆದಿ...Read more" } ", "keywords": "Kolar Gounipalli hospital controversy, government hospital medicines in school premises, healthcare issues in Kolar, Karnataka government hospital news, medicine stockpile in school, hospital administration controversy. ", "url": "https://dashboard.publicnext.com/node" } ಕೋಲಾರ - ಗೌನಿಪಲ್ಲಿ ಆಸ್ಪತ್ರೆ ಕರ್ಮಕಾಂಡ, ಶಾಲೆ ಆವರಣದಲ್ಲಿ ರಾಶಿಗಟ್ಟಲೆ ಸರ್ಕಾರಿ ಆಸ್ಪತ್ರೆ ಔಷಧಿ…!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಗೌನಿಪಲ್ಲಿ ಆಸ್ಪತ್ರೆ ಕರ್ಮಕಾಂಡ, ಶಾಲೆ ಆವರಣದಲ್ಲಿ ರಾಶಿಗಟ್ಟಲೆ ಸರ್ಕಾರಿ ಆಸ್ಪತ್ರೆ ಔಷಧಿ…!

ಶ್ರೀನಿವಾಸಪುರ : ರಾಶಿ ರಾಶಿ ಔಷಧಿಗಳನ್ನು ಕಸದಲ್ಲಿ ಬಿಸಾಡುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೌನಿಪಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಗಳನ್ನ ಮೂಟೆಗಳಲ್ಲಿ ಕಟ್ಟಿ ತಿಪ್ಪೆಯಲ್ಲಿ ಸುರಿದಿದ್ದಾರೆ. ಅವಧಿ ಮುಗಿದಿದೆ ಎಂದು ದೊಡ್ಡ ಪ್ರಮಾಣದ ಅಂದ್ರೆ ಲಕ್ಷಾಂತರ ರೂಪಾಯಿ ಮೌಲ್ಯದ ಮಾತ್ರೆ, ಟಾನಿಕ್ ಔಷಧಿಗಳನ್ನ ಮೂಟೆಗಳಲ್ಲಿ ಕಟ್ಟಿ ತಿಪ್ಪೆಗುಂಡಿಯಲ್ಲಿ ಬಿಸಾಡಿದ್ದಾರೆ. ಕೆಲವು ಅವಧಿ ಮೀರಿದೆ ಎಂದ್ರೆ ಮತ್ತೆ ಕೆಲವು ಅವಧಿ ಮುಗಿಯುವ ಮುನ್ನವೇ ಔಷಧಗಳನ್ನ ಬಿಸಾಡಿದ್ದಾರೆ ಎಂದು ಸ್ಥಳೀಯರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು, ಉದ್ದೇಶ ಪೂರ್ವಕವಾಗಿ ಇಂಡೆಂಡ್ ಮಾಡಿ ಪಡೆದಿರುವ ಔಷಧಗಳಾದ ಕ್ಯಾಲ್ಸಿಯಂ ಟ್ಯಾಬ್ಲೆಟ್ಸ್, ಬಿಪಿ ಮಾತ್ರೆ, ಭೇದಿ ಮಾತ್ರೆ ಸೇರಿದಂತೆ ಬಡವರಿಗೆ ಸಿಗಬೇಕಾದ ಔಷಧಗಳನ್ನ ಹಾಗೂ ಚುಚ್ಚು ಮದ್ದುಗಳ ಕಂತೆಯ ಮೂಟೆಗಳನ್ನ ಕಸದಲ್ಲಿ ಬಿಸಾಡಿದ್ದಾರೆ. ಲಕ್ಷಾಂತರ ರೂಪಾಯಿ ಔಷಧಿಗಳನ್ನು ತಿಪ್ಪೆಗುಂಡಿಗೆ ಬಿಸಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ನಡೆಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಆರೋಗ್ಯ ಇಲಾಖೆಗೆ ನಷ್ಟ ಉಂಟು ಮಾಡಿದ ಹಾಗೂ ಸಾರ್ವಜನಿಕರ ಹಣ ಪೋಲು ಮಾಡಿದ ಹಿನ್ನೆಲೆ ಕೂಡಲೇ ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

Edited By : Vinayak Patil
PublicNext

PublicNext

04/09/2025 11:43 am

Cinque Terre

15.1 K

Cinque Terre

0