ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: 10 ಜಾನುವಾರು ವಾಹನ ಸಮೇತ ವಶ- ನಾಲ್ವರು ಆರೋಪಿಗಳ ಬಂಧನ

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಮತ್ತೆ ಅಕ್ರಮ ಜಾನುವಾರು ಸಾಗಾಟ ಪತ್ತೆಯಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯ ತಂಡ ಶುಕ್ರವಾರ ಬೆಳಗ್ಗಿನ ಜಾವ ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ 10 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಮಾಹಿತಿಯ ಪ್ರಕಾರ, ಕೇರಳದಿಂದ ಭಟ್ಕಳ ಹನೀಫಾಬಾದ್ ಕಡೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಶೋಕ್ ಲೈಲೆಂಡ್ ಕಂಟೇನರ್‌ನ್ನು ಪೊಲೀಸರು ಹನೀಫಾಬಾದ್ ಪಿ.ಬಿ. ಇಬ್ರಾಹಿಂ ಪೆಟ್ರೋಲ್ ಬಂಕ್ ಹತ್ತಿರ ತಡೆದು ವಶಕ್ಕೆ ಪಡೆದಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ, ನೀರು- ಹುಲ್ಲು ಕೊಡದೇ ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಸಿಪಿಐ ಮಂಜುನಾಥ ಅಂಗಾರೆಡ್ಡಿ ಅವರ ನೇತೃತ್ವದ ತಂಡ ನಡೆಸಿದ್ದು, ಬಂಧಿತರಾದವರು ಅಬೂಬಕ್ಕರ್ ಗಂಗಾವಳಿ (ಮದೀನಾ ಕಾಲೋನಿ), ಹಮೀದ್ (ಕಾಸರಗೋಡು, ಕೇರಳ), ಆಸಿಫ್ (ಮುಜಫರ್ ನಗರ, ಉತ್ತರ ಪ್ರದೇಶ), ಶಾಹುಲ್ ಹಮೀದ್ ಕೆ. (ಹೈದ್ರಾಬಾದ್, ತೆಲಂಗಾಣ) ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

Edited By :
PublicNext

PublicNext

05/09/2025 10:46 pm

Cinque Terre

28.85 K

Cinque Terre

0