ಭಟ್ಕಳ: ಬಸ್ತಿ ಕಾಯ್ಕಿಣಿಯ ಗೃಹಿಣಿಗೆ ಗಂಡನ ಲೋನ್ ವಿಚಾರವಾಗಿ ಸ್ಥಳೀಯ ಯುವಕನಿಂದ ಜೀವ ಬೆದರಿಕೆ ಹಾಗೂ ಅವಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ನಯನಾ ಸಚಿನ್ ನಾಯ್ಕ (35) ಎಂಬ ಮಹಿಳೆಯ ಮನೆಗೆ ಆರೋಪಿ ತೇಜಸ್ ನಾಯ್ಕ ಇಬ್ಬರು–ಮೂರು ಜನರೊಂದಿಗೆ ಬಂದು “ನಿನ್ನ ಗಂಡನಿಗೆ ಎಷ್ಟು ಸಾರಿ ಲೋನ್ ಕಟ್ಟೊದು ಹೇಳಬೇಕು” ಎಂದು ಗದ್ದಲ ಮಾಡಿದನು. ಬಾಗಿಲು ತೆರೆಯದಿದ್ದರೆ ಹೊರಗೆ ಎಳೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಚಪ್ಪಲಿ ಎಸೆಯುವ ಮೂಲಕ ಅವಮಾನ ಮಾಡಿದನೆಂದು ದೂರು ದಾಖಲಿಸಲಾಗಿದೆ.
ಆರೋಪಿ ಬಳಿಕ ದೂರುದಾರ್ತಿಯ ಅತ್ತೆಯ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಗಲಾಟೆ ನಡೆಸಿದ್ದು, ದೇವರ ಫೋಟೋ ಸೇರಿದಂತೆ ಹಲವು ವಸ್ತುಗಳನ್ನು ಹಾನಿಗೊಳಿಸಿದ್ದಾನೆ.
ಈ ಬಗ್ಗೆ ನಯನಾ ಸಚಿನ್ ನಾಯ್ಕ ಅವರು ಮುರುಡೇಶ್ವರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
PublicNext
06/09/2025 06:38 pm