ಗುಂಡ್ಲುಪೇಟೆ: ಗುಂಡ್ಲುಪೇಟೆ ಪಟ್ಟಣದ ಕೇರಳ ಹೆದ್ದಾರಿಯಲ್ಲಿನ ನಿಸರ್ಗ ಲೇ ಔಟ್ ನಲ್ಲಿ ಕಾಣಿಸಿಕೊಂಡಿರುವ ಚಿರತೆ, ಸ್ಥಳೀಯ ನಿವಾಸಿಗಳನ್ನು ಭಯಭೀತಿಗೊಳಿಸಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಚಿರತೆ ಬಂಧನಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಬೋನು ಇರಿಸಿದೆ.
ಪಟ್ಟಣದ ಕೂಗಳತೆ ದೂರದಲ್ಲೇ ರಾತ್ರಿ ವೇಳೆ ಪ್ರತ್ಯಕ್ಷವಾಗಿದ್ದ ಈ ಚಿರತೆ ನಿಸರ್ಗ ಲೇ ಔಟ್ ನಲ್ಲೇ ಸಂಚರಿಸುತ್ತಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಎಸಿಎಫ್ ಸುರೇಶ್ ಕುಮಾರ್ ಸೂಚನೆಯ ಮೇರೆಗೆ ಬಡಾವಣೆಯಲ್ಲಿ ಬೋನು ಇರಿಸಿ ಚಿರತೆ ಬಂಧನಕ್ಕೆ ಖೆಡ್ಡಾ ಸಿದ್ಧಪಡಿಸಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ಮಾಡುತ್ತಿರುವುದು ಜನತೆಯನ್ನು ಅಚ್ಚರಿ, ಭೀತಿಗೊಳಗಾಗುವಂತೆ ಮಾಡಿದೆ.
Kshetra Samachara
06/09/2025 07:28 pm