ಚಾಮರಾಜನಗರ: ಭಾನುವಾರದಂದು ರಣ ರಣ ಕಗ್ರಾಸ ಚಂದ್ರಗ್ರಹಣ.. ಗ್ರಹಣ ಹಿನ್ನಲೆ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಿಗೆ ಬೀಗ ಬೀಳಲಿದೆ. ಆದ್ರೆ ಮಲೆ ಮಹದೇಶ್ವರನಿಗೆ ಮಾತ್ರ ಗ್ರಹಣದ ಕರಿಛಾಯೆ ತಟ್ಟೊಲ್ಲ, ಬರಿ ಈ ಚಂದ್ರಗ್ರಹಣ ಅಷ್ಟೇ ಅಲ್ಲ ಯಾವ ಗ್ರಹಣಕ್ಕೂ ಈ ದೇವಾಲಯ ಬಂದ್ ಆಗೋಲ್ಲ ಕಾರಣ ಏನು ಗೊತ್ತ ಈ ರಿಪೋರ್ಟ್ ನೋಡಿ..
ಭಾನುವಾರ ರಣ ರಣ ಕಗ್ರಾಸ ಚಂದ್ರಗ್ರಹಣ.. ಹುಣ್ಣಿಮೆಯ ದಿನದಂದು ಚೆಂದುಳ್ಳಿ ಚೆಲುವೆ ತರ ಮಿರ ಮಿರ ಮಿಂಚಬೇಕಿದ್ದ ಚಂದಮಾಮ ಗ್ರಹಣ ಹಿನ್ನಲೆ ಕಡುಗೆಂಪು ವರ್ಣಕ್ಕೆ ತಿರುಗಲಿದ್ದಾರೆ.. ಈಗಾಗ್ಲೆ ಜ್ಯೋತಿಶಿಗಳು ಗ್ರಹಣದ ಸೈಡ್ ಎಫೆಕ್ಟ್, ಪ್ರಕೃತಿ ವಿಕೋಪ ಜಲ ಪ್ರಳಯದ ಭವಿಷ್ಯ ನುಡಿಯುತ್ತಿದ್ರೆ ರಾಜ್ಯಾದ್ಯಂತ ಪ್ರಮುಖ ದೇವಾಲಯಗಳು ಗ್ರಹಣದ ಎಫೆಕ್ಟ್ ಗೆ ಬಂದ್ ಆಗಲಿದೆ. ಭಕ್ತರ ಪ್ರವೇಶಕ್ಕೆ ನಿರ್ಬಂದ ಹೇರಲಾಗಿದೆ. ಆದ್ರೆ ಹನೂರು ತಾಲೂಕಿನ ಮಲೆ ಮಹದೇಶ್ವರನ ಬೆಟ್ಟದಲ್ಲಿ ಮಾತ್ರ ಎಂದಿನಂತೆ ಪೂಜಾ ಕೈಂಕರ್ಯ ನಡೆಯಲಿದೆ.
PublicNext
07/09/2025 03:14 pm