ವಿರಾಜಪೇಟೆ : ಬೆಂಗಳೂರು ಹಾಗೂ ಮೈಸೂರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ನಡೆದಿದೆ.
ಕೈಲ್ ಮೂಹೂರ್ತ, ಗೌರಿ ಗಣೇಶ ಹಬ್ಬ, ಈದ್ ಮಿಲಾದ್, ಓಣಂ ಹಬ್ಬದ ವೇಳೆ ಕೊಡಗಿಗೆ ಆಗಮಿಸಿದ್ದ ಹಲವರು ಇಂದು ರಜೆ ಮುಗಿಸಿ ಮರಳಿ ಮೈಸೂರು, ಬೆಂಗಳೂರು, ಕೇರಳ ಸೇರಿದಂತೆ ವಿವಿಧ ಭಾಗಗಳಿಗೆ ಹೊರಟಿದ್ದರು. ವಿರಾಜಪೇಟೆಗೆ ಬಂದ ಬಳಿಕ ಗಂಟೆಗಟ್ಟಲೆ ಬಸ್‌ಗಾಗಿ ಕಾಯುತ್ತಿದ್ದರು, ಆದರೆ ಬಸ್‌ಗಳು ಬರದೆ ಪರದಾಡಿದರು. ಬಂದಿದ್ದ ಒಂದು-ಎರಡು ಬಸ್‌ಗಳು ಕೂಡಾ ಸಂಪೂರ್ಣ ತುಂಬಿ ಹೋಗುತ್ತಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
PublicNext
07/09/2025 04:56 pm