ಚಾಮರಾಜನಗರ : ಜಿಲ್ಲೆಯ ಅರಕಲವಾಡಿ ಗ್ರಾಮದ ಹೊರವಲಯದ ಶಾಂತಕುಮಾರ್ ಎಂಬವರ ಕ್ವಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ಬಿ.ಟಿ ಅವರ ನಿರ್ದೇಶನದ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸ್ ಠಾಣೆಯ ರಿಹಾನ ಬೇಗಂ ಮತ್ತು ಸಿಬ್ಬಂದಿ, ಕಲ್ಲುಬಂಡೆಗಳ ನಡುವೆ ಪ್ಲಾಸ್ಟಿಕ್ ಚೀಲದಲ್ಲಿ ಅಡಗಿಸಿಟ್ಟಿದ್ದ 53 ಜೆಲಟಿನ್ ಸ್ಟಿಕ್‌ಗಳು ಹಾಗೂ 20 ಇ.ಡಿ. ಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ವಾರಿಯಲ್ಲಿದ್ದ ಆಕಾಶ್ ಹಾಗೂ ಮ್ಯಾನೇಜರ್ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
PublicNext
07/09/2025 06:20 pm