ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗಿನ ದೇವಾಲಯಗಳಲ್ಲಿ ಗ್ರಹಣ ಶಾಂತಿ ಪೂಜೆ

ಮಡಿಕೇರಿ: ದೇಶದಾದ್ಯಂತ ನಿನ್ನೆ ಕಾಗ್ರಸ ಚಂದ್ರ ಗ್ರಹಣದ ಹಿನ್ನಲೆ ಸಂಜೆಯಿಂದ ದೇವಾಲಯಗಳು ಬಂದ್ ಆಗಿತ್ತು. ಇಂದು ಗ್ರಹಣ ಮುಗಿದ ಬಳಿಕ ದೇವಾಲಯ ಬಾಗಿಲು ತೆರೆದಿದ್ದು ಅರ್ಚಕರು ದೇವಾಲಯಗಳನ್ನ ಶುಚಿಗೊಳಿಸಿ ಗ್ರಹಣ ಶಾಂತಿ ಪೂಜೆ ಸೇರಿದಂತೆ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನ ಸಲ್ಲಿಸಿದ್ರು. ಮುಂಜಾನೆಯಿಂದಲೆ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಗ್ರಹಣ ಶಾಂತಿ ಪೂಜೆ ರುಧ್ರಾಭಿಶೇಕ ಸಂಕಲ್ಪ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳಲ್ಲಿ ತೋಡಗಿದ್ದಾರೆ. ಐತಿಹಾಸಿಕ ಓಂಕಾರೇಶ್ವರ ದೇವಾಲಕ್ಕೂ ಬೆಳಗಿನಿಂದಲೆ ಭಕ್ತಧಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪ್ರತಿ ಸೋಮವಾರ ಓಂಕಾರೇಶ್ವರ ದೇವಾಲದಲ್ಲಿ ತುಸು ಭಕ್ತರ ಸಂಖ್ಯೆ ಹೆಚ್ಚಾಗೆ ಇರ್ತಾರೆ. ಆದ್ರೆ ಗ್ರಹಣದ ಮಾರನೆದಿನವಾದ ಇಂದು ಸಾರ್ವಜನಿಕರ ಜೋತೆ ಪ್ರವಾಸಿಗರು ಕೂಡ ಹೆಚ್ಚಾಗಿ ಆಗಮಿಸಿದ್ದು. ವೀಶೇಷವಾಗಿತ್ತು.

Edited By : PublicNext Desk
Kshetra Samachara

Kshetra Samachara

08/09/2025 11:32 am

Cinque Terre

180

Cinque Terre

0