", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/283053_1757323629_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೋಲಾರ : ಮತ ಕಳ್ಳತನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಯೂತ್‌ ಕಾಂಗ್ರೆಸ್‌ನಿಂದ ನಗರದಲ್ಲಿ ನೆನ್ನೆ ಸಂಜೆ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗ...Read more" } ", "keywords": "Kolar Youth Congress factional feud intensifies Internal conflicts within Youth Congress in Kolar", "url": "https://dashboard.publicnext.com/node" } ಕೋಲಾರ : ಯೂತ್‌ ಕಾಂಗ್ರೆಸ್‌ ನಲ್ಲೂ ಬಣ ಜಗಳ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಯೂತ್‌ ಕಾಂಗ್ರೆಸ್‌ ನಲ್ಲೂ ಬಣ ಜಗಳ

ಕೋಲಾರ : ಮತ ಕಳ್ಳತನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಯೂತ್‌ ಕಾಂಗ್ರೆಸ್‌ನಿಂದ ನಗರದಲ್ಲಿ ನೆನ್ನೆ ಸಂಜೆ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಬಣ ಜಗಳ ನಡೆದಿದೆ.

ರಾಜ್ಯ ಯೂತ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುನಿಲ್‌ ನಂಜೇಗೌಡ ಹಾಗೂ ಜಿಲ್ಲಾ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ್‌ ಅಫ್ರಿದ್‌ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಕೋಲಾರ ಹಾಗೂ ಮಾಲೂರು ಕಾಂಗ್ರೆಸ್‌ ಮುಖಂಡರು ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದ್ದರು. ಕೋಲಾರದವರು ಪುಟಗೋಸಿ ಎಂದು ಸುನಿಲ್‌ ನಂಜೇಗೌಡ ಬಣದವರು ಹೇಳಿದ್ದು ಮತ್ತೊಂದು ಬಣಕ್ಕೆ ಸಿಟ್ಟು ತರಿಸಿದೆ. ಶಾಸಕರ ಪುತ್ರನೆಂದು ಧಮ್ಕಿ ಹಾಕಬಹುದೇ ಎಂದು ಪ್ರಶ್ನಿಸಿದರು.

'ಶಿಷ್ಟಾಚಾರ ಉಲ್ಲಂಘಿಸಿದ್ದಾರೆ, ಶಾಸಕರ ಮಗ ಎಂದುಕೊಂಡು ಬಂದರೆ ಕೋಲಾರದಲ್ಲಿ ನಡೆಯುವುದಿಲ್ಲ. ಶಿಷ್ಟಾಚಾರದಂತೆ ಅಧ್ಯಕ್ಷರನ್ನು ಸ್ವಾಗತಿಸಬೇಕಿರುವುದು ಜಿಲ್ಲಾ ಯೂತ್‌ ಅಧ್ಯಕ್ಷರು, ಕಾಸು ಖರ್ಚು ಮಾಡಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಾವು' ಎಂದು ಸೈಯದ್‌ ಅಫ್ರಿದ್‌ ವಾಗ್ದಾಳಿ ನಡೆಸಿದರು.

Edited By : PublicNext Desk
PublicNext

PublicNext

08/09/2025 02:57 pm

Cinque Terre

9.36 K

Cinque Terre

0