", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/283053_1757323902_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೋಲಾರ : ದೇಶದ 140 ಕೋಟಿ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಿಎಸ್‌ಟಿ ಸರಳೀಕರಣಗೊಳಿಸುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದ...Read more" } ", "keywords": "Node", "url": "https://dashboard.publicnext.com/node" }
ಕೋಲಾರ : ದೇಶದ 140 ಕೋಟಿ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಿಎಸ್‌ಟಿ ಸರಳೀಕರಣಗೊಳಿಸುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದು, ಜನರು ಈಗಲೇ ದೀಪಾವಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮೂಲ ಮಂತ್ರದೊಂದಿಗೆ ಜಿಎಸ್‌ಟಿ ಸರಳೀಕರಣ ಮಾಡಿರುವುದಕ್ಕೆ ವಿರೋಧ ಪಕ್ಷಗಳವರೂ ಬೆಂಬಲಿಸಿರುವುದು ಹೆಮ್ಮೆಯ ವಿಚಾರ ಎಂದರು.
ಹೋಟೆಲ್ ತಿಂಡಿ, ಊಟದ ಮೇಲೆ ಶೇ. 27 ರಿಂದ 5%, ಅಲ್ಲದೆ ಶೇ. 6ರಿಂದ 0%ಗೆ ಇಳಿಸಿದೆ. ಆರೋಗ್ಯ, ಶಿಕ್ಷಣ, ಕೃಷಿ, ಎಲೆಕ್ಟ್ರಾನಿಕ್ ಸೇರಿದಂತೆ ನಾನಾ ವಿಚಾರಗಳಲ್ಲಿ ಜಿಎಸ್ಟಿ ಪರಿಷ್ಕರಣೆಗೊಳಿಸಲಾಗಿದೆ. ಕಾರು, ದ್ವಿಚಕ್ರ ವಾಹನಗಳ ಮೇಲೆಯೂ ತೆರಿಗೆ ಕಡಿಮೆಯಾಗಿದೆ. ನವೆಂಬರ್ ಬಳಿಕ ಖರೀದಿಸಲು ಕಾಯುತ್ತಿದ್ದಾರೆ. ಔಷಧಿಗಳ ಮೇಲೂ ತೆರಿಗೆ ವಿನಾಯಿತಿ. ಸಣ್ಣ ವ್ಯಾಪಾರಿ, ಕುಶಲಕರ್ಮಿಗಳಿಗೂ ವಿನಾಯಿತಿ. ಯುವಕರಿಗೆ ಉದ್ಯೋಗವಕಾಶ ಸಿಗಲಿದೆ. ಪ್ರಧಾನಿ ಕೊಡುಗೆಯಿಂದಾಗಿ ಬಡ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅನುಕೂಲವಾಗಲಿದೆ ಎಂದರು.
PublicNext
08/09/2025 03:01 pm