ಭಾಗ್ಯನಗರ : ಸಾಲ ಬಾಧೆಯಿಂದ ತಪ್ಪಿಸಿಕೊಳ್ಳಲು ಹಣ ಕಳವು ಮತ್ತು ಕೊಲೆ ಯತ್ನ ನಾಟಕ ಮಾಡಲು ಹೋದ ಮಲ್ಲಿಕಾರ್ಜುನ ರೆಡ್ಡಿ ಎಂಬಾತ ಕತ್ತು ಸೀಳಿಕೊಂಡು ತನ್ನ ಪ್ರಾಣಕ್ಕೆ ತಾನೇ ಕಂಟಕ ತಂದುಕೊಂಡ ವಿಲಕ್ಷಣ ಘಟನೆ ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪಟ್ಟಣದ ಸಾರಿಗೆ ಸಂಸ್ಥೆ ಬಸ್ ಡಿಪೋ ರಸ್ತೆಯಲ್ಲಿ ವಾಸವಿರುವ ಮಲ್ಲಿಕಾರ್ಜುನ ರೆಡ್ಡಿ ಎಂಬ ಯುವಕ ಸ್ವಯಂಪ್ರೇರಿತನಾಗಿ ಕತ್ತು ಸೀಳಿಕೊಂಡು ಕೊಲೆಗೆ ಸಂಚು ರೂಪಿಸಿರುವ ನಾಟಕ ಆಡಿದ್ದಾನೆ. ಆದರೆ, ಪೊಲೀಸರು ತನ್ನ ಅಸಲಿ ನಾಟಕ ಬಟಾಬಯಲು ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಯಾವುದೇ ದರೋಡೆ ನಡೆದಿಲ್ಲ, ಹಣ ಕಳ್ಳತನ ನಡೆದಿಲ್ಲ ಎಂಬ ಸತ್ಯ ಹೊರ ಬಿದ್ದಿದೆ. ಮಲ್ಲಿಕಾರ್ಜುನ ರೆಡ್ಡಿಯನ್ನು ವಿಚಾರಣೆ ಮಾಡಿದಾಗ ಮೊಬೈಲ್ ಆ್ಯಪ್‌ನಲ್ಲಿ ಮಾಡಿದ ಸಾಲದ ಮುಜುಗರದಿಂದ ತಪ್ಪಿಸಿಕೊಳ್ಳಲು ತನ್ನ ಕತ್ತನ್ನು ತಾನೇ ಸೀಳಿಕೊಂಡು ಕೊಲೆ ಯತ್ನ ನಾಟಕ ಆಡಿರುವುದು ಎಂದು ಬೆಳಕಿಗೆ ಬಂದಿದೆ. ಇನ್ನು ಪಾತಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
08/09/2025 10:24 pm