", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1757411307-WhatsApp-Image-2025-09-09-at-3.18.17-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗೌರಿಬಿದನೂರು : ಪತ್ನಿಯ ಶೀಲ ಶಂಕಿಸಿ ಪತಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟಣೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಪಟ್ಟಣದಲ್ಲಿ ನ...Read more" } ", "keywords": "Chikkaballapur domestic violence, husband stabs wife, marital dispute, character assassination, crime news, domestic abuse cases, husband-wife conflict, stabbing incident, police investigation, crime against women ", "url": "https://dashboard.publicnext.com/node" }
ಗೌರಿಬಿದನೂರು : ಪತ್ನಿಯ ಶೀಲ ಶಂಕಿಸಿ ಪತಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟಣೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ಕಾದಲವೇಣಿ ಗ್ರಾಮದ ಹೇಮಾವತಿಗೆ ಪತಿ ನಾಗರಾಜ್ ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಸಂಚು ರೂಪಿಸಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ಪತ್ನಿ ಮೇಲೆ ಅನುಮಾನ ಹಿನ್ನೆಲೆ ಹಲವಾರು ಬಾರಿ ಜಗಳ ಮಾಡ್ತಿದ್ನಂತೆ. ಪತ್ನಿಯನ್ನ ರಾತ್ರಿಯ ವೇಳೆ ಹಿಂಸೆ ನೀಡಿ ಹೊಡೆಯುತ್ತಿದ್ದ. ಹಲವು ಬಾರಿ ಗಲಾಟೆ ಮಾಡುತ್ತಿದ್ದ ಎನ್ನುತ್ತಾಳೆ ಪತ್ನಿ. ಬಾಣಂತಿ ತನಕ್ಕೆ ತವರೂರು ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಗ್ರಾಮಕ್ಕೆ ಹೋಗಿದ್ದು, ಇಂದು ಮಂಚೇನಹಳ್ಳಿಯ ವರವಣಿ ಸತ್ಯಮ್ಮ ದೇವಸ್ಥಾನಕ್ಕೆ ಬಂದಿದ್ದನ್ನು ತಿಳಿದು ಪತ್ನಿಯನ್ನ ಹಿಂಬಾಲಿಸಿಕೊಂಡು ಬಂದು ಚಾಕುವಿನಿಂದ ದಾಳಿ ನಡೆಸಿದ್ದಾನೆ. ಹೇಮಾವತಿ ಜೋರಾಗಿ ಕಿರುಚಿದ್ದರಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಾಯಾಳು ಹೇಮಾವತಿಯನ್ನ ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ಆರೋಪಿಯನ್ನ ಹಿಡಿದು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ : ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
09/09/2025 03:21 pm