ಹೊಸಪೇಟೆ : ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಇಬ್ಬರೂ ಡಿಸಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಜಯನಗರ ಡಿಸಿ ದಿವಾಕರ್ ಜಾಗಕ್ಕೆ ಗವಿತಾ ಮನ್ನಿಕೇರಿ, ಬಳ್ಳಾರಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರ ಜಾಗಕ್ಕೆ ನಾಗೇಂದ್ರ ಪ್ರಸಾದ್ ಅವರನ್ನ ರಾಜ್ಯ ಸರ್ಕಾರ ನೇಮಿಸಿದೆ. ವಿಜಯನಗರ ಜಿಲ್ಲಾಧಿಕಾರಿಯಾಗಿ ದಿವಾಕರ್ ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸಿದ್ರೆ, ಬಳ್ಳಾರಿ ಡಿಸಿಯಾಗಿ ಪ್ರಶಾಂತ್ ಕುಮಾರ್ ಮಿಶ್ರ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ.
2012ನೇ ಬ್ಯಾಚ್ ಐಎಎಸ್ ಅಧಿಕಾರಿ ಕವಿತಾ ಮನ್ನಿಕೇರಿ ಅವರನ್ನ ನೇಮಿಸಿ ಆದೇಶ ಹೊರಡಿಸಿದ್ರೆ, 2015ನೇ ಬ್ಯಾಚ್'ನ ಐಎಎಸ್ ಅಧಿಕಾರಿ ನಾಗೇಂದ್ರ ಪ್ರಸಾದ್ ಅವರನ್ನ ನೇಮಿಸಿ ಆದೇಶ ಹೊರಡಿಸಿದೆ. ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಇಬ್ಬರು ಡಿಸಿಗಳು ಉತ್ತಮ, ಜನಪರ ಕಾಳಜಿ ಕಾರ್ಯದಿಂದ ಜನರ ವಿಶ್ವಾಸ ಗಳಿಸಿದ್ದರು. ಆದ್ರೀಗ ಇಬ್ಬರೂ ಐಎಎಸ್ ಅಧಿಕಾರಿಗಳನ್ನ ಸ್ಥಳ ನಿಯೂಕ್ತಿಗೊಳಿಸದೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
PublicNext
09/09/2025 03:39 pm