ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿಯಾಳ: ದೇವಸ್ಥಾನದಲ್ಲಿ 6 ಲಕ್ಷ ಮೌಲ್ಯದ ಬೆಳ್ಳಿ ಕವಚ ಕಳ್ಳತನ

ಹಳಿಯಾಳ ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.

ದೇವಸ್ಥಾನದ ಬಾಗಿಲು ಮತ್ತು ಚೌಕಟ್ಟಿಗೆ ಅಳವಡಿಸಲಾಗಿದ್ದ ಬೆಳ್ಳಿಯನ್ನು ಕಳ್ಳರು ಕಿತ್ತು ಪರಾರಿಯಾಗಿದ್ದಾರೆ.

ಸುಮಾರು 5 ಕೆಜಿ ತೂಕದ ಬೆಳ್ಳಿ ಕವಚವನ್ನು ಕಳವು ಮಾಡಲಾಗಿದ್ದು, ಇದರ ಮೌಲ್ಯ 6 ಲಕ್ಷ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಅಚ್ಚರಿಯ ಸಂಗತಿಯೇನೆಂದ್ರೆ ಈ ದೇವಸ್ಥಾನ ಹಳಿಯಾಳದ ನೂತನ ಬಸ್ ನಿಲ್ದಾಣ ಮತ್ತು ಪೊಲೀಸ್ ಠಾಣೆಯಿಂದ ಅತಿ ಸಮೀಪದಲ್ಲಿದೆ. ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ಪ್ರಸಿದ್ಧಿ ಪಡೆದ ಈ ದೇವಸ್ಥಾನದಲ್ಲಿ ನಡೆದ ಕಳ್ಳತನ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಳ್ಳನ ಕೈಚಳದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Suman K
PublicNext

PublicNext

09/09/2025 03:43 pm

Cinque Terre

8.63 K

Cinque Terre

0