ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಚಾತುರ್ಮಾಸದ ವ್ರತ ಸಮಾಪ್ತಿಗೊಳಿಸಿದ ಪರಮಪೂಜ್ಯ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು

ಹೊಸಪೇಟೆ : ಚಾತುರ್ಮಾಸದ ವ್ರತ ಸಮಾಪ್ತಿಗೊಳಿಸಿದ ಪರಮಪೂಜ್ಯ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು

ಹೊಸಪೇಟೆ : 3ನೇ ವರ್ಷದ ಸೀಮೋಲ್ಲಂಘನ ಭಾದ್ರಪದ ಶುಕ್ಲ ಹುಣ್ಣಿಮೆಯಂದು ಪರಮಪೂಜ್ಯ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು ತಮ್ಮ ಚಾತುರ್ಮಾಸದ ವ್ರತವನ್ನು ಸಮಾಪ್ತಿಗೊಳಿಸಿದರು.

ಹೊಸಪೇಟೆಯ ಚಿಂತಾಮಣಿ ಮಠದಲ್ಲಿ ಚಾತುರ್ಮಾಸ ವೃತದಲ್ಲಿದ್ದ ಶ್ರೀಗಳು ಭಕ್ತಾದಿಗಳ ಜೊತೆ ಸೇರಿ ನಿನ್ನೆ ತಮ್ಮ 3ನೇ ವರ್ಷದ ಸೋಮೋಲ್ಲಂಘನವನ್ನ ಪೂರ್ಣಗೊಳಿಸಿದ್ದಾರೆ. ಶ್ರೀ ಕ್ಷೇತ್ರದಲ್ಲಿ, ಶ್ರೀ ಚಿಂತಾಮಣಿ ಮಠದ ತಪ್ಪಲಿನಲ್ಲಿರುವ ತುಂಗಭದ್ರಾ ನದಿಗೆ ಪೂಜೆ ಸಲ್ಲಿಸಿ, ರುದ್ರಾಕ್ಷಿ ಮಂಟಪದಲ್ಲಿರುವ ಕಾಶಿ ವಿಶ್ವೇಶ್ವರನಿಗೆ ಪಂಚಾಮೃತ ಸಹಿತ ರುದ್ರಾಭಿಷೇಕವನ್ನು ನೆರವೇರಿಸಿ, ಚಿಂತಾಮಣಿ ಮಠದ ಮುಕ್ತಿನರಸಿಂಹನಿಗೆ ಮಂಗಳಾರತಿ ಬೆಳಗಿದ್ರು. ಚಾತುರ್ಮಾಸದಲ್ಲಿ ಶ್ರೀಗಳು ಸ್ವಲ್ಪವೂ ಭೋಜನವನ್ನು ಸ್ವೀಕರಿಸದೆ ಕೇವಲ ಫಲವನ್ನು ಮಾತ್ರ ಸ್ವೀಕರಿಸುತ್ತಾ ನಿತ್ಯವೂ ಶ್ರೀಮದ್ ವಾಲ್ಮೀಕಿ ರಾಮಾಯಣ ಪ್ರವಚನ ನೀಡಿ ಭಕ್ತರನ್ನ ಅನುಗ್ರಹಿಸಿದ್ದಾರೆ.

Edited By :
PublicNext

PublicNext

09/09/2025 03:53 pm

Cinque Terre

7.05 K

Cinque Terre

0