ಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ನೂರಾರು ಈರುಳ್ಳಿ ಬೆಳೆಗಾರರು ಮಾರುಕಟ್ಟೆಯಲ್ಲಿ ಯೋಗ್ಯವಾದ ದರ ಸಿಗದೇ ದಿಕ್ಕು ತೋಚದಂತಾಗಿದ್ದಾರೆ.
ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಸಿದ್ದೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕರ್ನಾಟಕದ ಈರುಳ್ಳಿ ಬೆಳೆಗಾರರ ಗೋಳು ಕೇಳುವವರು ಯಾರು ಇಲ್ಲ. ಸ್ವಲ್ಪ ಈ ಕಡೆಗೆ ಗಮನ ಹರಿಸಿ, ರೈತರಿಗೆ ಸರಾಸರಿ 4000 ಬೆಂಬಲ ಬೆಲೆ ಕೊಡಿ, ಖರೀದಿ ಕೇಂದ್ರ ಸಂಸ್ಥೆಗಳಾದ ಎನ್‌ಸಿಸಿಎಫ್ ಮತ್ತು ನಾಪೆಡ್ ತಾಲೂಕಿಗೆ ಒಂದು ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು. ಒಂದು ವೇಳೆ ಈರುಳ್ಳಿ ಬೆಳೆಗಾರರ ಬೇಡಿಕೆ ಈಡೇರಿಸದೇ ಹೋದ್ರೆ ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಅಂತ ಎಚ್ಚರಿಸಿದರು.
PublicNext
09/09/2025 04:11 pm