ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ಜಿಲ್ಲೆಯ ಯೋಧ ಜಲಂಧರ್‌ನಲ್ಲಿ ಹುತಾತ್ಮ!

ಗದಗ : ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಗದಗ ತಾಲ್ಲೂಕಿನ, ನರಗುಂದ ಮತಕ್ಷೇತ್ರ ವ್ಯಾಪ್ತಿಯ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಕರ್ತವ್ಯದಲ್ಲಿದ್ದಾಗಲೇ ಇಂದು ಬೆಳಗ್ಗೆ ವೀರಮರಣವನ್ನಪ್ಪಿದ್ದಾನೆ.

ಮೃತ ಯೋಧನಿಗೆ ಪತ್ನಿ, ಐದು ವರ್ಷದ ಪುತ್ರ, ತಂದೆ-ತಾಯಿ, ಸಹೋದರ ಸೇರಿ ಅಪಾರ ಬಂಧು-ಬಳಗವಿದೆ.

ಮೃತ ಯೋಧನ ಪಾರ್ಥೀವ ಶರೀರವು ಸೇನೆಯ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿವರೆಗೆ ಬಂದು, ಅಲ್ಲಿಂದ ಸ್ವಗ್ರಾಮ ಗದಗ ತಾಲ್ಲೂಕಿನ ಹಿರೇಕೊಪ್ಪ ಗ್ರಾ ಮಕ್ಕೆ ಬರಬಹುದ ಎಂದು ಹೇಳಲಾಗಿದೆ.

Edited By :
PublicNext

PublicNext

09/09/2025 04:40 pm

Cinque Terre

8.27 K

Cinque Terre

0