ಗದಗ : ಬಡವರ ಹೊಟ್ಟೆ ತುಂಬಿಸುವ ಯೋಜನೆಯ ಅಕ್ಕಿಯನ್ನು ಕೆಲವರು ತಮ್ಮ ಲಾಭಕೋಸ್ಕರ್ ದಂಧೆಯಾಗಿ ಮಾಡಿಕೊಂಡು ಊರ ಊರು ಗಲ್ಲಿಗಲ್ಲಿಯಲ್ಲಿ ಅನ್ನಭಾಗ್ಯ ಯೋಜನೆಯ ಲೋಟಿ ಮಾಡುತ್ತಿದ್ದಾರೆ. ಗದಗ ಬೆಟಗೇರಿಯ ಬಣ್ಣದ ನಗದಲ್ಲಿ 18 ಕ್ವಿಂಟಲ್ ಅಕ್ಕಿವನ್ನು ಪೊಲೀಸರು ವಸಕ್ಕೆ ಪಡೆದಿದ್ದಾರೆ.
ಅನ್ನಭಾಗ್ಯ ಅಕ್ಕಿ ದಂಧೆಯಲ್ಲಿ ಪಾಲ್ಗೊಂಡಿದ ಶ್ರೀಕಾಂತ್ ಭಜಂತ್ರಿಯವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗದಗ ಜಿಲ್ಲಾದ್ಯಾಂತ ಅಕ್ರಮ ಅಕ್ಕಿ ದಂಧೆಯೂ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ನಡೆಯುತ್ತಿದ್ದು ಈ ಅಕ್ರಮ ಅಕ್ಕಿದಂಧೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ಅಕ್ರಮ ಅಕ್ಕಿ ದಂಧೆಗೆ ಬ್ರೇಕ್ ಹಾಕಬೇಕಿದೆ.
ಸುರೇಶ ಎಸ್ ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ
PublicNext
09/09/2025 04:42 pm