ಕಾರವಾರ : ನಗರದಲ್ಲಿ ಬಿಡಾಡಿಜಾನುವಾರುಗಳ ಹಾವಳಿ ಹೆಚ್ಚಾಗುದ್ದು ದಿನೇ ದಿನೇ ಅವುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಸಂಚಾರದಲ್ಲಿ ತೊಂದರೆ ಮಾತ್ರವಲ್ಲದೇ ಅಪಘಾತಗಳಾಗುವ ಸಂಖ್ಯೆಯೂ ಹೆಚ್ಚಾಗಿದೆ.
ತಾಲೂಕಿನಲ್ಲಿ ಬಿಡಾಡಿ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೇ ನಗರ ವ್ಯಾಪ್ತಿಯಲ್ಲಿಯೂ ಈ ಸಮಸ್ಯೆ ತಲೆದೂರಿದ್ದು ಇದರಿಂದ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸಿವೆ. ಆದರೆ ಇವಗಳ ಸೂಕ್ತ ನಿರ್ವಹಣೆ ಇಲ್ಲದೆ ವಾಹನ ಸವಾರರು ಹೈರಾಣಾಗಿದ್ದಾರೆ. ರಾತ್ರಿಯ ವೇಳೆಗೆ ರಸ್ತೆಯಲ್ಲಿಯೇ ಮಲಗುವ ಈ ಜಾನುವಾರುಗಳು ಕೆವೊಮ್ಮೆ ವಾಹನಗಳ ದಟ್ಟನೆಗೆ ಕಾರಣವಾಗುತ್ತವೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ, ಎಂಜಿ ರಸ್ತೆ, ನಂದನಗದ್ದಾ, ಹಬ್ಬುವಾಡ, ರೈಲ್ವೆ ನಿಲ್ದಾಣ ರಸ್ತೆ ಸೇರಿದಂತೆ ವಿವಿಧೆಡೆ ಗುಂಪು ಗುಂಪಾಗಿ ಮಲಗುವ ಜಾನುವಾರುಗಳು ವಾಹನ ದಟ್ಟನೆಗೆ ಕಾರಣವಾಗುತ್ತಿವೆ. ರಸ್ತೆಯಲ್ಲಿ ಒಮ್ಮಲೆ ಸಿಗುವ ಇವುಗಳಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದು ಕ೩ಲವು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಕಾರವಾರದಲ್ಲಿ ಗೋಶಾಲೆ ಉದ್ಘಾಟನೆಯಾದರೂ ಯಾವುದೇ ಪ್ರಯೋಜನವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
09/09/2025 04:57 pm