ಬ್ರಹ್ಮಾವರ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಬ್ರಹ್ಮಾವರ ಪೊಲೀಸ್ ಠಾಣೆ, ಚಾಂತಾರು ಗ್ರಾಮ ಪಂಚಾಯಿತಿ, ಮತ್ತು ಕ್ರಾಸ್ ಲ್ಯಾಂಡ್ ಕಾಲೇಜಿನ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಮಾಹಿತಿ ಕಾರ್ಯಕ್ರಮ ಕಾಲೇಜು ಬಳಿ ರಸ್ತೆಯಲ್ಲಿ ಮಂಗಳವಾರ ಜರುಗಿತು.
ಈ ಸಂದರ್ಭ ಬ್ರಹ್ಮಾವರ ಸಬ್‌ಇನ್ಸ್ಪೆಕ್ಟರ್ ಅಶೋಕ್ ಮಾಳಲಗಿ ಮಾತನಾಡಿ ಮಾದಕ ಪದಾರ್ಥಗಳ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಯುವ ಜನಾಂಗವನ್ನು ಹಾಳು ಮಾಡಲು ಜಾಲಗಳು ಇದ್ದು ಯುವಕರು ಜಾಗೃತರಾಗಬೇಕು. ಯುವಶಕ್ತಿ ರಾಷ್ಟ್ರದ ಸಂಪತ್ತು ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಮತ್ತು ಮಾದಕ ವ್ಯಸನಿಯ ಕುರಿತ ಮೈಮ್ ಶೋ ಸಾರ್ವಜನಿಕರ ಗಮನ ಸೆಳೆಯಿತು. ಏ ಎಸ್ ಐ ವಿಠಲ್,ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್ ಕೇಂವ್, ಚಾಂತಾರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ, ಪೊಲೀಸ್ ಇಲಾಖೆಯ ಸುರೇಶ್, ಮಾದಕ ದ್ರವ್ಯ ವಿರೋಧಿ ಜಾಗೃತಿ ಸಮಿತಿಯ ಸಂಚಾಲಕ ಬಿಜು ಜೇಕಬ್, ಎನ್.ಎಸ್.ಎಸ್ ಘಟಕ, ಕಲೆ ಮತ್ತು ಸಾಹಿತ್ಯ ವೇದಿಕೆ, ರೆಡ್‌ಕ್ರಾಸ್, ಇನ್ನಿತರ ಸಂಘಟನೆಗಳು ಸಹಕರಿಸಿದ್ದರು.
PublicNext
09/09/2025 05:27 pm