ನೆಲಮಂಗಲ: ಕಂಪನಿಯಲ್ಲಿ ನೈಟ್ ಶಿಫ್ಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ 29 ವರ್ಷದ ಕಾರ್ಮಿಕನೊರ್ವ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ನೆಲಮಂಗಲ ತಾಲ್ಲೂಕು ಬಿಲ್ಲಿನಕೋಟೆಯಲ್ಲಿರೋ ಎಸ್ಕಾನ್ ಜೆನ್ಸೆಟ್ ಪ್ರೈ.ಲಿ ಕಂಪನಿಯಲ್ಲಿ ನಡೆದಿದೆ.
ನೆಲಮಂಗಲ ತಾಲ್ಲೂಕಿನ ನರಸೀಪುರ ಗ್ರಾಮದ ಎನ್.ಸಿ ಗಿರಿ ಗೌಡ 29 ವರ್ಷ ಮೃತ ಕಾರ್ಮಿಕನಾಗಿದ್ದು, ಕೆಲಸದ ವೇಳೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪರಿಣಾಮ ದಾಬಸ್ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಿದ್ಧಗಂಗಾ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ಕಾರ್ಮಿಕ ಗಿರಿಗೌಡ ಕೊನೆಯುಸಿರೆಳೆದಿದ್ದಾನೆ.
ಇನ್ನೂ ನವೆಂಬರ್ ತಿಂಗಳಿನಲ್ಲಿ ಮೃತ ಗಿರಿಗೌಡಗೆ ಮದುವೆ ಮಾಡಲು ಗುರುಹಿರಿಯರು ನಿಶ್ಚಯಿಸಿದ್ರಂತೆ, ಆದ್ರೆ ಮದುವೆ ಮುನ್ನವೇ ಗಿರಿಗೌಡ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಕರ್ತವ್ಯದ ವೇಳೆಯಲ್ಲಿ ಮೃತಪಟ್ಟ ಹಿನ್ನಲೆ ಕಂಪನಿ ವತಿಯಿಂದ 15 ಲಕ್ಷ ಪರಿಹಾರ ನೋಡೋದಾಗಿ ಕಂಪನಿ ಮ್ಯಾನೇಜ್‌ಮೆಂಟ್ ಮೃತನ ಕುಟುಂಬಕ್ಕೆ ಭರವಸೆ ನೀಡಿದೆಯಂತೆ. ದಾಬಸ್ಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನ ಮೃತನ ಕುಟುಂಬಸ್ಥರಿಗೆ ಹಸ್ತಾರಿಸಲಾಗಿದೆ. ಈ ಸಂಬಂಧ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/09/2025 06:23 pm