ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ನಿಯಮ ಬಾಹಿರವಾಗಿ ಟೋಲ್ ನಿರ್ವಹಣೆ ಆರೋಪ - ಕರವೇ ಪ್ರತಿಭಟನೆ

ಹಾಸನ : ರಾಜ್ಯ ಹೆದ್ದಾರಿ ನಿಯಮಗಳನ್ನು ಗಾಳಿ ತೂರಿ ನಿಯಮಬಾಹಿರವಾಗಿ ಟೋಲ್ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣೆ ವೇದಿಕೆ ಸಂಘಟನೆ ಕಟ್ಟಾಯ ಟೋಲ್ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ಹಾಸನ ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಟೋಲ್ ವಿರುದ್ಧ ಕರವೇ ಸಂಘಟನೆ ಅಧ್ಯಕ್ಷ ಸೋಮು ನೇತೃತ್ವದಲ್ಲಿ ದಿಢೀರ್ ಪತ್ರಿಭಟನೆ ನಡೆಸಿ krdcl ಅಧಿಕಾರಿಗಳ ವಾಹನ ತಡೆದು ಘೋಷಣೆ ಕೂಗಿದರು ,

ಕೆಆರ್ ಡಿ ಸಿ ಎಲ್ ಅಧಿಕಾರಿಗಳು ಮತ್ತು ಟೋಲ್ ಗುತ್ತಿಗೆದಾರರು ರಾಜ್ಯ ಹೆದ್ದಾರಿ ನಿಯಮಗಳನ್ನು ನಿರ್ಲಕ್ಷಿಸಿ ಟೋಲ್ ನಿರ್ವಹಣೆ ಮಾಡುತ್ತಿದ್ದು ಹಾಸನ ಪಿರಿಯಾಪಟ್ಟಣ ರಸ್ತೆ ಸಾರ್ವಜನಿಕರು ಓಡಾಟಕ್ಕೆ ಅನುಕೂಲವಾಗಿದ್ದು ಟೋಲ್ ಸ್ಥಳದಲ್ಲಿ ಶೌಚಾಲಯದ ವ್ಯವಸ್ಥೆ ಹಾಗೂ ರಸ್ತೆ ದೀಪಗಳ ಅವ್ಯವಸ್ಥೆ ಮತ್ತು ಅಪಘಾತ ಸಂಭವಿಸಿದಾಗ ತುರ್ತು ಆಂಬುಲೆನ್ಸ್ ವ್ಯವಸ್ಥೆ ಇಲ್ಲ ಜೊತೆಗೆ ರಸ್ತೆ ಗುಂಡಿಗಳನ್ನು ಮುಚ್ಚದೆ KRDCL ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಾರ್ವಜನಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ‌ ಎಂದು ಆರೋಪಿಸಿ ಪತ್ರಿಭಟನೆ ನೆಡಸಿದರು.

Edited By : PublicNext Desk
PublicNext

PublicNext

09/09/2025 06:43 pm

Cinque Terre

7.73 K

Cinque Terre

0