", "articleSection": "Government,Agriculture", "image": { "@type": "ImageObject", "url": "https://prod.cdn.publicnext.com/s3fs-public/474798-1757423703-gobbara.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಾಗ್ಯನಗರ: ತಾಲೂಕಿನಲ್ಲಿ ಯೂರಿಯಾ ಸಮಸ್ಯೆ ತೀವ್ರಗೊಂಡಿದೆ. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತರೂ ಯೂರಿಯಾ ಸಿಗದ ಕಾರಣ ರೈತರು ಗೊಬ್ಬರಕ್ಕಾ...Read more" } ", "keywords": "fertilizer shortage Chikkaballapur, urea scarcity, farmers struggle, long queues for fertilizers, agricultural issues Karnataka, Chikkaballapur news, fertilizer crisis, urea availability issues, farmer protests, agricultural challenges, rural development issues, government intervention required, private fertilizer sales, black marketing of fertilizers.", "url": "https://dashboard.publicnext.com/node" } ಚಿಕ್ಕಬಳ್ಳಾಪುರ : ಬೆಳಗ್ಗೆಯಿಂದ ಕಾಫಿ, ತಿಂಡಿ, ಮನೆ ಬಿಟ್ಟು ಸರತಿ ಸಾಲಿನಲ್ಲಿ ನಿಂತರೂ ಸಿಗದ ರಸಗೊಬ್ಬರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ : ಬೆಳಗ್ಗೆಯಿಂದ ಕಾಫಿ, ತಿಂಡಿ, ಮನೆ ಬಿಟ್ಟು ಸರತಿ ಸಾಲಿನಲ್ಲಿ ನಿಂತರೂ ಸಿಗದ ರಸಗೊಬ್ಬರ

ಭಾಗ್ಯನಗರ: ತಾಲೂಕಿನಲ್ಲಿ ಯೂರಿಯಾ ಸಮಸ್ಯೆ ತೀವ್ರಗೊಂಡಿದೆ. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತರೂ ಯೂರಿಯಾ ಸಿಗದ ಕಾರಣ ರೈತರು ಗೊಬ್ಬರಕ್ಕಾಗಿ ಪರದಾಡಿರುವ ಘಟನೆ ಪಟ್ಟಣದ ಟಿ ಎ ಪಿ ಸಿ ಎಂ ಎಸ್‌ ರಸಗೊಬ್ಬರದ ಮಳಿಗೆ ಮುಂದೆ ನಡೆಯಿತು.

ಪಟ್ಟಣದಲ್ಲಿ ತಡ ರಾತ್ರಿ ಮಳೆ ಬೀಳುತ್ತಿದ್ದಂತೆಯೇ ಪೊಲೀಸ್ ಠಾಣೆ ಸಮೀಪ ಇರುವ ಟಿಎಪಿಸಿಎಂಎಸ್‌ ರಸಗೊಬ್ಬರ ಮಳಿಗೆ ಮುಂದೆ ಯೂರಿಯಾಗಾಗಿ ನೂರಾರು ರೈತರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಸರತಿಯಲ್ಲಿ ರೈತರಿಗೆ ಯೂರಿಯಾ ನೀಡಲಾಗುತಿತ್ತು. ಸಾಲಿನಲ್ಲಿ ನಿಂತಿದ್ದ ಎಲ್ಲಾ ರೈತರಿಗೆ ಯೂರಿಯಾ ಪೂರೈಕೆ ಮಾಡಲು ಸಾಧ್ಯವಾಗದೆ ಅಂಗಡಿಯ ಮಳಿಗೆ ಸಿಬ್ಬಂದಿ ಹರಸಾಹಸ ಪಟ್ಟರು.

ತಾಲೂಕಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ಯೂರಿಯಾ ಸಿಗುತ್ತಿಲ್ಲ. ಬೆಳೆಗಳಿಗೆ ಯೂರಿಯಾ ಗೊಬ್ಬರ ಅಗತ್ಯವಿದ್ದಾಗ ರಸಗೊಬ್ಬರದ ಅಂಗಡಿಗಳಿಗೆ ಅಲೆದಾಡುವುದು ಸರ್ವೇಸಾಮಾನ್ಯವಾಗಿದೆ. ತಾಲೂಕಿನ ಎಲ್ಲಾ ಕಡೆ ಮಳೆಯಾಗಿದ್ದು ಈ ಹಿನ್ನೆಲೆ ಕೊಳವೆ ಬಾವಿ ಮೂಲಕ ರೈತರು ವ್ಯವಸಾಯ ಮಾಡುತ್ತಿದ್ದು,ಮುಂಗಾರು - ಹಿಂಗಾರು ಬೆಳೆಗಳಿಗೆ ಯೂರಿಯಾ ಅತ್ಯವಶ್ಯಕವಾಗಿದೆ. ಈ ವೇಳೆ ರೈತರು ಯೂರಿಯಾಗಾಗಿ ನೂಕುನುಗ್ಗಲಾಟ ಮಾಡಿದರು. ನಾ ಮುಂದು ತಾ ಮುಂದು ಎಂಬಂತೆ ಒಬ್ಬರ ಮೇಲೆ ಒಬ್ಬರು ಬಿದ್ದು ಪರದಾಡಿದರು.

Edited By :
PublicNext

PublicNext

09/09/2025 06:45 pm

Cinque Terre

11.46 K

Cinque Terre

0