ಹಾಸನ : ಈ ಕಾಲ ಸರಕಾರಿ ನೌಕರರ ಕಾಲವಲ್ಲ,ಬದಲಾಗಿ ಸ್ವಂತ ಉದ್ಯೋಗ ಮಾಡುತ್ತೇವೆ ಎಂದು ಯಾರು ಹೊರಡುತ್ತಾರೋ ಅವರಿಗಿದು ಸೂಕ್ತ ಕಾಲ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಕೆ.ಎಸ್. ತಿಳಿಸಿದರು.
ಜಿಪಂ ಹೊಯ್ಸಳ ಸಭಾಂಗಣದ ಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಕೃಷಿ ಇಲಾಖೆ ಹಾಗೂ ಕೆಪೆಕ್ ಲಿಮಿಟೆಡ್ ಇವರ ಜಂಟಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಬಗ್ಗೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರಿ ನೌಕರರ ಕಾಲ ಇದಲ್ಲ. ಏನಿದ್ದರೂ ಉದ್ಯಮಿದಾರರ ಕಾಲ, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಸ್ಕಿಂನಲ್ಲಿ ಲೋನ್ ಪಡೆಯ ಬೇಕೆಂದು ಹೇಳಿದಾಗ ಅವರಿಗೆ ಸಹಾಯ ಮಾಡಬೇಕು. ರೈತರಿಗೆ ಶಕ್ತಿ ತುಂಬುವ ಕೆಲಸ ಇಲಾಖೆಯವರು ಮಾಡಬೇಕು ಎಂದು ಸಲಹೆ ನೀಡಿದರು.
PublicNext
09/09/2025 06:52 pm