ಕಟೀಲು : ಅಮೇರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಐದು ಬಂಗಾರದ ಪದಕಗಳನ್ನು ಪಡೆದ ಕಟೀಲಿನ ಕೀರ್ತನ್ ಕುಂದರ್ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಿ ಬಳಿಕ ನಡೆದ ಸಭೆಯಲ್ಲಿ ಗೌರವಿಸಲಾಯಿತು, ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ ಕ್ಷೇತ್ರದ ಪ್ರಸಾದ ನೀಡಿ ಆಶೀರ್ವಚನ ನೀಡಿದರು.
ಶ್ರೀಸಾಯಿ ಗುರೂಜಿ, ಕೀರ್ತನ್ ಅವರ ಗುರು ವಿಜಯ ಕಾಂಚನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಗಿರೀಶ್ ಶೆಟ್ಟಿ, ಅಭಿಲಾಷ್ ಶೆಟ್ಟಿ ಕಟೀಲು, ದೊಡ್ಡಯ್ಯ ಮೂಲ್ಯ ಕಟೀಲು, ತಿಮ್ಮಪ್ಪ ಕೋಟ್ಯಾನ್, ಕೀರ್ತನ್ ತಂದೆ ಚಂದ್ರಹಾಸ ಕುಂದರ್, ತಾಯಿ ನಿರ್ಮಲಾ, ಪ್ರೇಮ್‌ರಾಜ್ ಶೆಟ್ಟಿ ಬರ್ಕೆ, ನೀಲಯ್ಯ ಕೋಟ್ಯಾನ್, ಶೈಲೇಶ ಅಂಚನ್, ರಮಾನಂದ ಪೂಜಾರಿ, ಅಶೋಕ್ ಕೊಂಡೇಲ, ದುರ್ಗಾಪ್ರಸಾದ್ ಶೆಟ್ಟಿ, ಸೀತಾರಾಮ ಶೆಟ್ಟಿ, ವಿಜಯ ಶೆಟ್ಟಿ ಅಜಾರುಗುತ್ತು, ಶುಭಲತಾ ಶೆಟ್ಟಿ, ಸೂರಜ್ ಶೆಟ್ಟಿ ಕೊಂಡೇಲ, ಸಂತಾನ್ ಡಿ ಸೋಜ, ಶೋಭಾ, ಗಂಗಾಧರ ಶೆಟ್ಟಿ ಮತ್ತಿತರರಿದ್ದರು.
PublicNext
09/09/2025 07:54 pm