ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕನ್ನಡ ನಿತ್ಯೋತ್ಸವ, ಕಾಫಿನಾಡಿನಲ್ಲಿ ಡಿ.24ಕ್ಕೆ 70ನೇ ಅದ್ದೂರಿ ಕನ್ನಡ ಹಬ್ಬ!

ಚಿಕ್ಕಮಗಳೂರು: ಕನ್ನಡ ಸೇನೆ ವತಿಯಿಂದ ಇದೇ ಡಿಸೆಂಬರ್ 24 ರಂದು ಚಿಕ್ಕಮಗಳೂರಿನಲ್ಲಿ 70ನೇ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಕನ್ನಡ ನಿತ್ಯೋತ್ಸವ ಶೀರ್ಷಿಕೆಯಡಿ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜೇಗೌಡ ತಿಳಿಸಿದ್ರು. ಡಿಸೆಂಬರ್ 24 ರ ಮಧ್ಯಾಹ್ನ 2 ಗಂಟೆಗೆ ಕನ್ನಡ ಸೇನೆ ಜಿಲ್ಲಾ ಕಚೇರಿಯಿಂದ ಮೆರವಣಿಗೆ ನಡೆಯಲಿದ್ದು ಭುವನೇಶ್ವರಿ ತಾಯಿಯ ಬೆಳ್ಳಿ ರಥಕ್ಕೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಚಾಲನೆ ನೀಡಲಿದ್ದಾರೆ.

ಹುಲಿವೇಷ, ವೀರಗಾಸೆ, ಕೋಲಾಟ ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸಂಜೆ 5 ಗಂಟೆಗೆ ಆಜಾದ್ ಪಾರ್ಕ್ ವೃತ್ತದಲ್ಲಿ ಹಾಸ್ಯ ಸಂಜೆ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಾದ ಟೆನ್ನಿಸ್ ಕೃಷ್ಣ, ಮಿಮಿಕ್ರಿ ಗೋಪಿ, ನಯನ, ಹಾಗೂ ಗಾಯಕರಾದ ಕಂಬದ ರಂಗಯ್ಯ, ಅಖಿಲಾ ಪಜಿಮಣ್ಣು ತಂಡದಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಎಚ್.ಡಿ. ತಮ್ಮಯ್ಯ, ಎಂ.ಎಲ್.ಸಿ ಗಳಾದ ಸಿ.ಟಿ. ರವಿ, ಎಸ್.ಎಲ್.ಭೋಜೆಗೌಡ, ಮಾಜಿ ಎಂ.ಎಲ್.ಸಿ ವೈ.ಎಸ್.ವಿ. ದತ್ತ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಮತ್ತು ಪತ್ರಕರ್ತರು ಸೇರಿದಂತೆ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ರಾಜೇಗೌಡ ತಿಳಿಸಿದ್ದಾರೆ.

Edited By : Vinayak Patil
PublicNext

PublicNext

16/12/2025 10:45 pm

Cinque Terre

2.78 K

Cinque Terre

0