ಚೆನ್ನೈ: ಆಯುಷ್ ಮ್ಹಾತ್ರೆ ಅರ್ಧಶತಕ, ಸರ್ಫರಾಜ್ ಖಾನ್ ಸ್ಫೋಟಕ ಬ್ಯಾಟಿಂಗ್, ಶಿವಂ ದುವೆ ತಾಳ್ಮೆಯ ಆಟದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಂಜಾಬ್ ಕಿಂಗ್ಸ್ ಗೆ 210 ರನ್‌ಗಳ ಗುರಿ ನೀಡಿದೆ.
ಚೆನ್ನೈನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 2026ರ 7ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 5 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದೆ. ತಂಡದ ಪರ ಆಯುಷ್ ಮ್ಹಾತ್ರೆ 73 ರನ್, ಶಿವಂ ದುಬೆ ಅಜೇಯ 45 ರನ್, ಸರ್ಫರಾಜ್ ಖಾನ್ 32 ರನ್, ನಾಯಕ ಋತುರಾಜ್ ಗಾಯಕ್ವಾಡ 28 ರನ್ ಗಳಿಸಿದರು.
PublicNext
03/04/2026 09:36 pm
LOADING...