ಸಿಂಗಾಪುರ ಸತತ ಮೂರನೇ ವರ್ಷವೂ ವಿಶ್ವದ ಅತ್ಯಂತ ದುಬಾರಿ ನಗರ ಎಂದು ಜ್ಯೂಲಿಯಸ್ ಬೇರ್ ವರದಿ ಹೇಳಿದೆ. ಲಂಡನ್ ಎರಡನೇ ಸ್ಥಾನದಲ್ಲಿದೆ ಮತ್ತು ಹಾಂಗ್ ಕಾಂಗ್ ಮೂರನೇ ಸ್ಥಾನದಲ್ಲಿದೆ.
ದುಬಾರಿ ನಗರದಲ್ಲಿ ವಸತಿ, ಆಹಾರ, ತೆರಿಗೆ, ಮನೆ ಬಾಡಿಗೆ, ಆರೋಗ್ಯ ವೆಚ್ಚ, ಮಕ್ಕಳ ಶಾಲೆಯ ವೆಚ್ಚ ಎಲ್ಲವೂ ದುಬಾರಿಯಾಗಿರುತ್ತದೆ. ವಿಶ್ವದಲ್ಲಿರುವ ಸಾಕಷ್ಟು ನಗರಗಳಲ್ಲಿ ವಾಸಿಸಲು ಜನರು ಒಲವು ತೋರಿಸುತ್ತಾರೆ. ಇದರ ಮೂಲಕ ಅವರು ಉತ್ತಮವಾದ ಜೀವನವನ್ನು ಸಾಗಿಸಬಹುದು ಎಂದು ಬಯಸುತ್ತಾರೆ. ಅಂತಹ ದುಬಾರಿ ನಗರದಲ್ಲಿ ದುಬಾರಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ.
ವಿಶ್ವದ ದುಬಾರಿ ನಗರ ಎಂದು ಪಡೆದಿರುವ ಮೊದಲ ದೇಶ ಸಿಂಗಾಪುರ ಹೌದು, ಸಿಂಗಾಪುರ ವಿಶ್ವದಲ್ಲಿರುವ ದುಬಾರಿ ನಗರಗಳ ಪಟ್ಟಿಯಲ್ಲಿ ಮೊದಲೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇದು ಮೊದಲ ಬಾರಿಯಲ್ಲ, ಬದಲಾಗಿ ಸತತವಾಗಿ ಮೂರನೇ ಬಾರಿ. ಇಲ್ಲಿ ಸಾಕಷ್ಟು ಸಂಪತ್ತು ಹೊಂದಿರುವ ವ್ಯಕ್ತಿಗಳು ಹೊಂದಿರುವ ದುಬಾರಿ ನಗರ ಎಂದು ಗುರುತಿಸಿಕೊಂಡಿದೆ.
ಮಿಲಿಯನ್ ಡಾಲರ್ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವವರು ಖರೀದಿಸಿದ ವಸ್ತುಗಳು ಮತ್ತು ಅವರ ಐಷಾರಾಮಿ ಜೀವನ ಆಧರಿಸಿ ಈ ವರದಿಯನ್ನು ರಚಿಸಲಾಗಿದೆ.
2025 ರ ವಿಶ್ವದ ದುಬಾರಿ ನಗರಗಳ ಪಟ್ಟಿ
ಸಿಂಗಾಪುರ
ಲಂಡನ್
ಹಾಂಕಾಂಗ್
ಮೊನಾಕೋ
ಜ್ಯೂರಿಚ್
ಶಾಂಘೈ
ದುಬೈ
ನ್ಯೂಯಾರ್ಕ್
ಪ್ಯಾರಿಸ್
ಮಿಲನ್
PublicNext
16/07/2025 05:44 pm