", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/454738-1753096892-New-(1280-x-720-px)---2025-07-21T163642.617.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "Harish.K" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಟ ದರ್ಶನ್ ಥೈಲ್ಯಾಂಡ್ ಗೆ ತೆರಳಿ ಆರು ದಿನಗಳು ಕಳೆದಿವೆ. ಮೂಲಗಳ ಪ್ರಕಾರ, ಸಿನಿಮಾದ ಹಾಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕೆಲವು ದಿನ ದರ್ಶನ...Read more" } ", "keywords": "Darshan Enjoys Beach Time in Thailand", "url": "https://dashboard.publicnext.com/node" } ಶೂಟಿಂಗ್‌ ಮಧ್ಯೆ ಥೈಲ್ಯಾಂಡ್ ಬೀಚ್‌ನಲ್ಲಿ ದರ್ಶನ್ ಫುಲ್ ಎಂಜಾಯ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೂಟಿಂಗ್‌ ಮಧ್ಯೆ ಥೈಲ್ಯಾಂಡ್ ಬೀಚ್‌ನಲ್ಲಿ ದರ್ಶನ್ ಫುಲ್ ಎಂಜಾಯ್

ನಟ ದರ್ಶನ್ ಥೈಲ್ಯಾಂಡ್ ಗೆ ತೆರಳಿ ಆರು ದಿನಗಳು ಕಳೆದಿವೆ. ಮೂಲಗಳ ಪ್ರಕಾರ, ಸಿನಿಮಾದ ಹಾಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕೆಲವು ದಿನ ದರ್ಶನ್ ಅಲ್ಲಿಯೇ ಇದ್ದು ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಥೈಲ್ಯಾಂಡ್ ನ ಫುಕೆಟ್ ಮತ್ತು ಬ್ಯಾಂಕಾಕ್‌ನಲ್ಲಿ ‘ಡೆವಿಲ್’ ಚಿತ್ರದ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. ಸುಮಾರು 10 ದಿನಗಳ ಕಾಲದ ವಿದೇಶಿ ಶೆಡ್ಯೂಲ್‌ಗಾಗಿ ದರ್ಶನ್ ಹೊರನಾಡಿಗೆ ಪ್ರಯಾಣ ಬೆಳೆಸಿದ್ದರು. ಇದೇ ಮಂಗಳವಾರ ದರ್ಶನ್ ಜಾಮೀನು ರದ್ದುಪಡಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಲಿದೆ ಎಂದು ತಿಳಿದಿದ್ದು, ಇದು ಅಭಿಮಾನಿಗಳಲ್ಲಿ ಆತಂಕವನ್ನು ಹುಟ್ಟಿಸಿದೆ.ಈ ನಡುವೆ, ದರ್ಶನ್ ಥೈಲ್ಯಾಂಡ್ ನಲ್ಲಿ ಸ್ನೇಹಿತರೊಂದಿಗೆ ಆರಾಮವಾಗಿ ಇರುವ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ದರ್ಶನ್ ಪತ್ನಿ ಹಾಗೂ ಪುತ್ರನೊಂದಿಗೆ ವಿದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ದೀರ್ಘ ವಿರಾಮದ ಬಳಿಕ ಅವರು ವಿದೇಶಿ ಪ್ರಯಾಣ ಮಾಡಿಕೊಂಡಿದ್ದು, ಮುಂದೆಯೂ ಮತ್ತೆ ಹೋಗಬೇಕಾದರೆ ಕೋರ್ಟ್‌ನ ಅನುಮತಿ ಅಗತ್ಯವಾಗಲಿದೆ. ಯಾವ ಕಾರಣವಾಗಿದರೂ, ದರ್ಶನ್‌ ಜಾಮೀನು ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ಅವರೆಗೆ ದರ್ಶನ್ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

Edited By :
PublicNext

PublicNext

21/07/2025 04:52 pm

Cinque Terre

7.03 K

Cinque Terre

0