", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/463655-1753156500-manjunath-(8).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ: ಕೂಡಲಸಂಗಮ ಪೀಠದ ಸ್ವಾಮೀಜಿಗೆ ವಿಷಪ್ರಾಶನದ ಶಂಕೆ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ವಿರುದ್ಧ ಶಾಸಕ ವಿಜಯಾನಂದ ಕ...Read more" } ", "keywords": "The most relevant answer part is: Yatnal Bellad, CC Patil, Kashappanavar, Yatnal Bellad criticism, CC Patil controversy, Kashappanavar political, Karnataka politics, Political statement, Karnataka news, Indian politics, Political debate, "There is no answer for loafers!", Yatnal Bellad Kashappanavar, CC Patil Kashappanavar, Karnataka political news ", "url": "https://dashboard.publicnext.com/node" } "ಲೋಫರ್‌ಗಳಿಗೆ ಉತ್ತರವೇ ಇಲ್ಲ!" ಯತ್ನಾಳ್ ಬೆಲ್ಲದ, ಸಿಸಿ ಪಾಟೀಲ್ ಮೇಲೆ ಕಾಶಪ್ಪನವರ ಕಿಡಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಲೋಫರ್‌ಗಳಿಗೆ ಉತ್ತರವೇ ಇಲ್ಲ!" ಯತ್ನಾಳ್ ಬೆಲ್ಲದ, ಸಿಸಿ ಪಾಟೀಲ್ ಮೇಲೆ ಕಾಶಪ್ಪನವರ ಕಿಡಿ

ದಾವಣಗೆರೆ: ಕೂಡಲಸಂಗಮ ಪೀಠದ ಸ್ವಾಮೀಜಿಗೆ ವಿಷಪ್ರಾಶನದ ಶಂಕೆ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಇದು ನಾಟಕ, ನಿಜವಲ್ಲ" ಎಂದು ಆರೋಪಗಳನ್ನು ತಳ್ಳಿಹಾಕಿದ ಕಾಶಪ್ಪನವರು, “ಅರವಿಂದ ಬೆಲ್ಲದ ಅವರು ನಿಜವಾಗಿಯೂ ಲಿಂಗಾಯತ ಸಮುದಾಯದವರೇ ಆಗಿದ್ದರೆ ಡಿಎನ್‌ಎ ಪರೀಕ್ಷೆ ಮಾಡಿಸಲಿ” ಎಂದು ಸವಾಲು ಹಾಕಿದರು.

"ಸುಮ್ಮನೆ ಗೂಬೆ ಕೂರಿಸುವ ಕೆಲಸ ಬೇಡ. ಯತ್ನಾಳನಂತಹ ವ್ಯಕ್ತಿಗಳು ಪಂಚಮಸಾಲಿ ಸಮಾಜದ ಹೆಸರಿನಲ್ಲಿ ವಿಭೂತಿ ಹಚ್ಚಿದವರನ್ನು ಪ್ರಶ್ನಿಸುತ್ತಿದ್ದಾರೆ. ಇವರು ಲೋಫರ್‌ಗಳು. ನಾನು ತನು-ಮನ-ಧನದಿಂದ ಕೂಡಲಸಂಗಮ ಪೀಠಕ್ಕೆ ಸೇವೆ ಸಲ್ಲಿಸಿದ್ದೇನೆ. ಇಂತಹವರಿಗೆ ಉತ್ತರ ನೀಡುವ ಅವಶ್ಯಕತೆಯೇ ಇಲ್ಲ" ಎಂದು ಕಿಡಿಕಾರಿದರು.

"ಬಿಜೆಪಿಯವರು ಹೊರತುಪಡಿಸಿ ಯಾರೂ ಸ್ವಾಮೀಜಿಯ ಬಳಿ ಹೋಗಿಲ್ಲ. ಜೆಡಿಎಸ್‌ನ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕೂಡ ಬಿಜೆಪಿ ಮೈತ್ರಿ ಪಕ್ಷದವರು. ಸ್ವಾಮೀಜಿಯ ಆರೋಗ್ಯ ಕುರಿತು ವೈದ್ಯರ ಜೊತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಸುಳ್ಳು ಆರೋಪಗಳಿಗೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ, ಕುಗ್ಗೋದಿಲ್ಲ," ಎಂದು ಕಾಶಪ್ಪನವರು ಹೇಳಿದರು.

"ಅರವಿಂದ ಬೆಲ್ಲದ ಅವರು ಪ್ರತಿಪಕ್ಷ ನಾಯಕನಾಗಿದ್ದಾರೆ. ಅವರೇ ತನಿಖೆ ನಡೆಸಲಿ, ಸತ್ಯ ಬಯಲಾಗಲಿ. ಇವೆಲ್ಲಾ ರಾಜಕೀಯ ಒತ್ತಡದಿಂದ ಉಂಟಾದ ಆರೋಪಗಳು," ಎಂದು ಕಾಶಪ್ಪನವರು ಟೀಕಿಸಿದರು.

Edited By :
PublicNext

PublicNext

22/07/2025 09:25 am

Cinque Terre

12.74 K

Cinque Terre

6

ಸಂಬಂಧಿತ ಸುದ್ದಿ