ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೀನ್ಯಾದಲ್ಲೇ SSMB29 ಚಿತ್ರೀಕರಣ: 1200 ಕೋಟಿ ರೂ ಬಜೆಟ್, 120 ದೇಶಗಳಲ್ಲಿ ಬಿಡುಗಡೆ - ಮತ್ತೊಂದು ದಾಖಲೆಯತ್ತ ರಾಜಮೌಳಿ

ಬಾಹುಬಲಿ ಚಿತ್ರದ ಖ್ಯಾತಿಯ ಎಸ್.ಎಸ್.ರಾಜಮೌಳಿ ಅವರು ಮತ್ತೊಂದು ದಾಖಲೆಗೆ ಕೈಹಾಕಿದ್ದಾರೆ. ಸೂಮಾರು 1200 ಕೋಟಿ ರೂಪಾಯಿ ಬಜೆಟ್ ಸಿನಿಮಾ ಪ್ರೇಕ್ಷಕರನ್ನು ತಲುಪಲಿದೆ. ರಣ, ಉರಿ, ಮಗಧೀರ್‌, ಬಾಹುಬಲಿಯಂತಹ ಥ್ರಿಲ್ಲಿಂಗ್ ಮೂವಿಗಳನ್ನು ನೀಡಿದ ರಾಜಮೌಳಿ ತಮ್ಮ ಮುಂಬರುವ 'ಎಸ್ಎಸ್ಎಂಬಿ29' (SSMB29) ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದಾರೆ.

ಹೌದು. SSMB29 ಸಿನಿಮಾ ಸುಮಾರು 120ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನ ಕಾಣಲಿದೆ. ಟಾಲಿವುಡ್‌ನ ಖ್ಯಾತ ನಿರ್ಮಾಪಕ ಕೆ.ಎಲ್.ನಾರಾಯಣ ಅವರು SSMB29 ಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ. ಅವರು ಇತ್ತೀಚೆಗೆ ಕೀನ್ಯಾದ ವಿದೇಶಾಂಗ ವ್ಯವಹಾರಗಳ ಕ್ಯಾಬಿನೆಟ್ ಕಾರ್ಯದರ್ಶಿ ಮುಸಾಲಿಯಾ ಮುಡವಾಡಿ ಅವರನ್ನು ಭೇಟಿ ಮಾಡಿ, ಚಿತ್ರೀಕರಣಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಇದರೊಂದಿಗೆ SSMB29 ಚಿತ್ರತಂಡವು ಕೀನ್ಯಾದಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.

ಈ ಚಿತ್ರದಲ್ಲಿ ಮಹೇಶ್ ಬಾಬು ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರು ನಟಿಸಿದ್ದಾರೆ. ಇಲ್ಲಿಯವರೆಗೆ, ಈ ಚಿತ್ರಕ್ಕೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ.

ಈ ಚಿತ್ರವನ್ನು ಮಹೇಶ್ ಬಾಬು ತಮ್ಮ ಸಾಮಾಜಿಕ ಮಾಧ್ಯಮ ಫೀಡ್‌ನಲ್ಲಿ ಮೊದಲ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, "ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ನಿಮ್ಮೆಲ್ಲರಂತೆಯೇ ನಾನು ಸಹ ನವೆಂಬರ್ 2025ಕ್ಕೆ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ" ಎಂದು ಶೀರ್ಷಿಕೆಯನ್ನು ಸಾಮಾಜಿಕ ಮಾದ್ಯಮವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

08/09/2025 02:50 pm

Cinque Terre

23.64 K

Cinque Terre

0